ಬೆಳದಿಂಗಳು
ನಾ ಬೆಳದಿಂಗಳು ಹಾಲಂತಿರುವೆ
ನಿತ್ಯವು ನಗುತಲಿ ನಾ ಬಳಿ ಬರುವೆ
ಚಂದ್ರನ ಮುಖದಿಂ ನಾ ಹೊರ ಬರುವೆ
ಶುಕ್ಲ ಪಕ್ಷದಲಿ ನಿಮ್ ಜತೆಗಿರುವೆ..
ಕೃಷ್ಣ ಪಕ್ಷದಲಿ ನಾ ಕೈ ಕೊಡುವೆ
ಹಾಲಿನಂದದಲಿ ತಂಪನ್ನೀಯುವೆ
ನಲ್ಲಗೂ ನಲ್ಲೆಗೂ ಒಟ್ಟಾಗಿಸುವೆ
ಪ್ರೀತಿಯ ಕಂಪನು ಹೆಚ್ಚಿಸೆ ಬರುವೆ..
ಬೆಳ್ಳನೆ ಮಾಡದ ಅಂಚಲಿ ಇಣುಕುವೆ
ಗಿಡ ಮರ ಬಳ್ಳಿಯ ಮೀಯಿಸಿ ಬಿಡುವೆ
ಪ್ರೇಮದ ಕನಸನು ಉಕ್ಕಿಸಿ ತರುವೆ
ನಾ ಬೆಳದಿಂಗಳು ಹಾಲಂತಿರುವೆ..
@ಪ್ರೇಮ್@
23.11.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ