ಶುಕ್ರವಾರ, ಜನವರಿ 1, 2021

ಉಪಾಯ ಬಲ್ಲವನಿಗೆ...

ಉಪಾಯ ಬಲ್ಲವನಿಗೆ ಅಪಾಯವಿಲ್ಲ

(ನರಿ ಮತ್ತು ಕಾಗೆಯ ಮುಂದಿನ ಪೀಳಿಗೆಯ ಕತೆ)

  ಒಂದು ದಿನ ಹಸಿದ ಚಿಂಟು  ನರಿ ಆಹಾರ ಹುಡುಕುತ್ತಾ ಹೊರಟಿತು. ಆಗಷ್ಟೆ ಎದ್ದು ಹಲ್ಲುಜ್ಜುತ್ತಿದ್ದ ಬ್ಲಾಕಿ ಕಾಗೆಗೆ ಕೆಳಗೆ ಪಮ್ಮಿ ಎಸೆದಿದ್ದ ಕಬಾಬ್ ಪೀಸೊಂದು ಸಿಕ್ಕಿತು. "ಆಹಾ" ಎನುತ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಚಿಂಟು ನರಿಯ ಆಗಮನವಾಯ್ತು. "ಅಲೆಲೆಲೆ ತುಂಟು ಕಣ್ಣ ಸುಂದರಿ ...ನೀನೇ ಹಾಡೋ ವಯ್ಯಾರಿ.. ನನಗಾಗಿ ಹಾಡಲಾರೆಯಾ.."ಎಂದಿತು ಚಿಂಟು ನರಿ. ಬ್ಲಾಕಿ ಕಾಗೆಗೆ ಅದರಮ್ಮ ಅವರ ಅಜ್ಜಿ ಕಾಗೆ ನರಿಗೆ ಮೋಸ ಹೋದ ಕತೆಯನ್ನು ಹೇಳಿದ್ದರು.
    ಅಮ್ಮ ಹೇಳಿದ ಕತೆಯನ್ನು ನೆನಪಿಸಿದ ಜಾಣೆ ಬ್ಲಾಕಿ ಕಬಾಬ್ ತುಂಡನ್ನು ಮರದ ಮೇಲಿಟ್ಟು ಹಾಡಿತು,"ಕನ್ಯಾ ಕುಮಾರಿಯರು ನಿಂಗೆ ಸವಾಲು, ಕೆಮರಾ ನೀನಾದರೆ ನಾ ಒಳಗಿರೋ ರೀಲು..ಕಾ..ಕಾ.." ಬಂದ ದಾರಿಗೆ ಸುಂಕವಿಲ್ಲ, ಇವಳು ಅಜ್ಜಿಯಂತಲ್ಲ, ಜಾಣೆಯೆಂದು ತಿಳಿದ ಚಿಂಟು ನರಿ ಕಾಲಿಗೆ ಬುದ್ಧಿ ಹೇಳಿತು.

ನೀತಿ-ಕಾಲಕ್ಕೆ ತಕ್ಕಂತೆ ಬದಲಾದರೆ ಬಾಳಬಹುದು.
😃😃😃😃
@ಪ್ರೇಮ್@
02.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ