ಭಾವ
ನುಡಿನುಡಿಯಲು ಪದವಾಡು ನೀ ಕನ್ನಡ ತಾಯೆಂದು
ಕಡಿಕಡಿದರೂ ಹಿಡಿ ಹಿಡಿಯಲಿ ಆಡು ನೀ ಕನ್ನಡವನೆಂದು..
ಕೊನೆಕೊನೆಯಲು ನಗೆಯಿರುವುದು ಬದುಕಿನ ಬಯಲಲ್ಲಿ
ಮನೆಮನೆಯಲು ಪೂಜೆಯಿರಲಿ ಭುವನೇಶ್ವರಿ ನುಡಿಯಲ್ಲಿ..
ದಿನದಿನದಲು ಬಳಬಳಸುತ ಕನ್ನಡ ನುಡಿ ಚಂದ
ಪದಪದದಲು ಆಡಲು ಅದು ಕನ್ನಡವೇ ಅಂದ..
ಭಾಷೆ ಭಾಷೆಯಲು ಉತ್ತಮವದು ನಮ್ಮೀ ಮಾತೃಭಾಷೆ
ಕಾಸುಕಾಸಿಗು ಸಿಗದು ಇದು ಮಾತೆಯ ನುಡಿ ಭಾಷೆ
ಕಲ್ಲು ಕಲ್ಲಲು ಕೆತ್ತಿರುವುದು ಕನ್ನಡಿಗನ ಭಾವ
ತುಟಿತುಟಿಯಲು ನಗೆಯುಕ್ಕುತ ತೊರೆಯುತಿದೆ ಅಹಂಭಾವ
ಭಾವ ಭಾವವು ಒಟ್ಟಾಗುತ ಹೊರಸೂಸಿದೆ ಗುಡಿಯು
ಕಾವು ಕಾವಲು ಬೆಸೆದಿಹುದು ಮರೆಯದ ಸಿಹಿನುಡಿಯು..
ಮನಮನದಲು ಪುಟಿದೆದ್ದಿದೆ ಕನ್ನಡದ ತೇರು
ತನುತನುವಲು ಗರಿಗೆದರಿದೆ ಭಾವಗಳು ನೂರು..
@ಪ್ರೇಮ್@
08.01.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ