ಶುಕ್ರವಾರ, ಜನವರಿ 29, 2021

ಸುಗ್ಗಿಪದ

ಸುಗ್ಗಿ ಪದ

ಹಿಗ್ಗುತ ಬಂತದು ಸುಗ್ಗಿಯ ಕಾಲವು
ತಗ್ಗಿ ಬಗ್ಗಿ ನಡೆಯುವ ಭೂತಾಯಿಗೆ..
ಮಗ್ಗಿಯಂತೆ ಕೊಡುವಳು ಬೆಳೆಯನು ಮಕ್ಕಳಿಗೆ
ಮೊಗ್ಗಿನಂತರಳಿದೆ ರೈತನ ಹೂನಗೆ..

ಹುಗ್ಗಿಯ ಮಾಡಿ ತಿನ್ನಲು ಬನ್ನಿರೊ
ಕುಗ್ಗುತ ಬಾಳದೆ ಹಿಗ್ಗಲಿ ಬದುಕಿರೊ..

ಅಗ್ಗದಲೆಲ್ಲ ಸಿಗುವುದು ಇಲ್ಲಿ
ಸಗ್ಗದ ಐಸಿರಿ ಬಂದಿಹುದಿಲ್ಲಿ
ಒಗ್ಗಲು ಬೇಕು ಧರೆಯ ಕೆಲಸಕೆ
ಬಗ್ಗಲು ಬೇಕು ಬೆಳೆಯ ಕಾಯಕಕೆ

ಮಗ್ಗಲು ಬದಲಾಯಿಸಿ ದುಡಿಯಲು ಬೇಕು
ಮುಗ್ಗಲು ಬರದಂತೆ ತಡೆಯಲು ಬೇಕು
ಹಗ್ಗದ ಮೇಲೆ ಬಾಳುವ ಆಟವು
ಜಗ್ಗದೆ ಬಾಳಿರೊ ರೈತರೆ ತಾವು..
@ಪ್ರೇಮ್@
13.01.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ