ನಮ್ಮ ಮನೆಯಲೊಂದು ಸಣ್ಣ...
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಅಮ್ಮನೊಡನೆ ಬಹಳವಾಗಿ ಹಟವ ಮಾಡುವುದು
ಅಪ್ಪನಿರಲು ಗಪ್ ಚಿಪ್ ಕೂಡಾ ಸದ್ದು ಮಾಡದು
ಮೊಬೈಲ್ ಸಿಕ್ಕರೆ ಸಂತಸದಿಂದ ಆಡಿ ನಲಿವುದು
ಓದು ಬರೆ ಎನಲು ಬಹಳ ಕೋಪ ಬರುವುದು
ಊಟ ಮಾಡು ಎನಲು ಬೇಗ ನಿದ್ದೆ ಬರುವುದು
ಬೇಕರಿ ತಿಂಡಿ ತಂದು ಕೊಡಲು ಹೊಟ್ಟೆ ಹಸಿಯುವುದು
ಕೇಸರಿ ಬಣ್ಣ ಎನಲು ಬಹಳ ಇಷ್ಟ ಪಡುವುದು..
ಮೊಸರು ಇಟ್ಟರೆ ಒಂದು ಪ್ಯಾಕೆಟ್ ಬಿಡದೆ ಕುಡಿವುದು
ಮೀನು ಮಾಂಸ ಮೊಟ್ಟೆಯೆನಲು ಬೇಗ ಓಡಿ ಬರುವುದು
ತರಕಾರಿಯ ನೋಡಿ ದೂರ ಓಡಿ ಬಿಡುವುದು
ಪರಪರನೆ ಗಲಾಟೆ ಮಾಡಿ ನಗಿಸಿ ಬಿಡುವುದು
ಮಕ್ಕಳ ಜೊತೆಗೆ ಆಟವಾಡಿ ದಿನವ ಕಳೆವುದು
ಸಿಕ್ಕರೆ ಬಿಡದೆ ಸಿಹಿತಿಂಡಿಯ ಮುಕ್ಕಿ ಬಿಡುವುದು..
ಪಾಪ ಅಳುತ ಬೇಕೆನ್ನುತ ಹಠವ ಮಾಡುವುದು
ಜೋರು ಮಾಡಲು ಹೊಡೆಯಿರೆನುತ ತಾನೇ ಕೋಲು ತರುವುದು..
ಪೆಟ್ಟು ಕೊಡಲು ಮತ್ತೂ ಬೇಕೆನುತ ಗಟ್ಟಿ ಕೂರುವುದು
ಟಿವಿ ನೋಡುತ ರಾತ್ರಿ ಹನ್ನೊಂದು ಗಂಟೆ ಮಾಡುವುದು
ನೆಂಟರು ಬಂದರೆ ಹೋಗಲು ಬಿಡದೆ ಕಟ್ಟಿ ಹಾಕುವುದು
ರಂಪ ಮಾಡುತ ಬೇಕು ಬೇಕು ಎನುತ ಅಳುವುದು..
@ಪ್ರೇಮ್@
05.01.2020
👶👧👶👶👶👶👶👶
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ