ಇನಿಯ
ಸನಿಹ ಬರುವ ನಿನಗೆ ಒಲವ
ತರಲು ಧರೆಯೆ ಸಖನು ಬರುವ
ಮನದ ದುಗುಡ ಎಲ್ಲ ಕಳೆವ
ಮುದವ ತಂದು ನುಡಿಸಿ ಮೆರೆವ
ಬರಹ ವಿರಹ ಮರೆವ ತರುವ
ನೆನಪ ತರುತ ನಗಿಸಿ ನಗುವ
ನನಗೆ ನೀನೆ ಬೇಕು ಎನುವ
ಹರಸಿ ಹೇಳಿ ಖುಷಿಯ ಕೊಡುವ
ಚಿನ್ನ ರನ್ನ ಮುದ್ದು ಎನುವ
ಕಂದ ಅಂದ ಚಂದ ಕರೆವ
ಮುಂದೆ ಹಿಂದೆ ಸುತ್ತ ಸುಳಿವ
ಬಯಸಿ ಬದುಕ ತಾನು ಕಳೆವ
ಕನಕ ಧನಕ ಪದಕ ತರುವ
ಉಸಿರು ಹಸಿರು ನೀನೆ ಎನುವ
ವದನ ನಯನ ದಲ್ಲು ಚೆಲುವ
ಭಯದ ಭವವ ಸದಾ ಕಳೆವ..
@ಪ್ರೇಮ್@
17.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ