ಶುಕ್ರವಾರ, ಜನವರಿ 1, 2021

ವಿಮರ್ಶೆ ಎಂದರೇನು?


-ವಾಣಿ ಭಂಡಾರಿ
ಮತ್ತು‌ ನಿನ್ನೆ ಕೆಲವು ಕವಿಗಳು ವಿಮರ್ಶೆ ಕುರಿತು ತಿಳಿಸಿ ಎಂದ ಪ್ರಯುಕ್ತ 

ನನಗೆ ತಿಳಿದ ಸ್ವಲ್ಪ ಅಂದ್ರೆ ಸ್ವಲ್ಪವೆ ಮಟ್ಟಿನ ವಿಚಾರ ಧಾರೆಯನ್ನು ಬರೆದಿರುವೆ ಒಮ್ಮೆ ಗಮನಿಸಿ 
ವಿನುತ ಜಿ.


*ನಮಸ್ತೇ ಕವಿಮಿತ್ರರೆ*
🙏🏻🙏🏻🙏🏻🙏🏻🙏🏻🙏🏻
ಈ ವಿಚಾರಗಳನ್ನು ನಿಮ್ಮ ಜೊತೆ  ಹಂಚಿಕೊಳ್ಳಬೇಕೆನಿಸಿತು ಅದಕ್ಕೆ ಬರೆಯುತ್ತಿರುವೆ ಮಿತ್ರರೆ.

    *ಕವಿ -ಸಹೃದಯ-ವಿಮರ್ಶಕ*

    *ಕವಿ*:-  ಸಾಹಿತ್ಯ ಲೋಕದ ಮೊದಲನೆಯ *ಕಣ್ಣು*( poet)
ಸೂಕ್ಷ್ಮ ಮತಿ ಆದ ಕವಿ ಹೊರ,ಒಳ ಕಣ್ಣಿನಿಂದ ಗ್ರಹಿಸಿ ನವೀನ ಸುಂದರವಾದ ಜಗತ್ತನ್ನು ನಿರ್ಮಿಸುತ್ತಾನೆ.ಬ್ರಹ್ಮ ಸೃಷ್ಟಿ ಯನ್ನೇ ತಲೆಕೆಳಗು ಮಾಡಿಬಿಡುವ ಕವಿಯನ್ನು ಎರಡನೆಯ ಬ್ರಹ್ಮ ಎನ್ನುವರು, ಏಕೆಂದರೆ *ಮಮ್ಮಟನ ಕಾವಯಪ್ರಕಾಶದಲ್ಲಿ*" *ನಿಯತಿಕೃತ ನಿಯಮರಹಿತಾಂ ಆಹ್ಲಾದಕಮಯೀಮನನ್ಯ ಪರತಂತ್ರ ನವರಸ ರಿಚಿತಾ ನಿರ್ಮಿತು ಮಾದಧತಿ ಭಾರತೀ ಕರ್ವೇರ್ಜಯತಿ* ಅಂದರೆ "ನಿಯತಿಕೃತ ನಿಯಮರಹಿತವಾದ ಆಹ್ಲಾದರೂಪಿಯಾದ ಅನನ್ಯಪರತಂತ್ರವಾದ, ನವರಸ ಮನೋಹರವಾದ ನವಸೃಷ್ಟಿಯನ್ನೀಯುವ ಕವಿಯ ವಾಣಿ ಗೆಲ್ಲುತ್ತದೆ "
 ಇದರ ಜೊತೆಗೆ *ಆನಂದವರ್ಧನ ತನ್ನ (ಧ್ವನ್ಯಲೋಕದಲ್ಲಿ*) *ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ ಯಥಾಸ್ಮೈ ರೋಚತೇ ವಿಶ್ವಂ ತಥೇವಂ ಪರಿವರ್ತತೇ*
ಅಂದರೆ "ಅಪಾರವಾದ ಕಾವ್ಯ ಸಂಸಾರದಲ್ಲಿ ಕವಿಯೆ ಬ್ರಹ್ಮ, ಅವನ ಇಷ್ಟದಂತೆ ವಿಶ್ವವೆ ಪರಿವರ್ತನೆ ಗೊಳ್ಳುತ್ತದೆ" ಸೂಕ್ಷ್ಮ ವಾದ ಅನುಭವ ಸಾಮರ್ಥ್ಯ ಹೊಂದಿದರೆ ಸಾಕಾಗುವುದಿಲ್ಲ ಕವಿಭಾವ ಆದೇಶದಲ್ಲಿ ಕೆರಳಿ ತನ್ನೊಳಗೆ ಬೇರೊಂದು ಜಗತ್ತನ್ನು ಸೃಷ್ಟಿಸುವ ಸಾಮರ್ಥ್ಯ ಕವಿಗೆ ಇರುತ್ತದೆ.ಕಾವ್ಯ ಮೀಮಾಂಸಕರು ಕವಿಯ ಈ ಶಕ್ತಿಯನ್ನು *ಲಘಿಮಾ ಕೌಶಲ*(Secondary Imagination) *ಕಾರಯತ್ರಿ ಪ್ರತಿಭೆ* ಹೀಗೆ ಮುಂತಾಗಿ ಕರೆಯುವರು. ಕವಿಗಳಲ್ಲಿ  *ರಚನ ಕವಿ, ಶಬ್ದ ಕವಿ, ಅರ್ಥಕವಿ ಅಲಂಕಾರಕವಿ , ಉಕ್ತಿ, ಕವಿ‌ ,ರಸ ಕವಿ, ಮಾರ್ಗಕವಿ, ಶಾಸ್ತ್ರ ಕವಿ, ಎಂದು ಎಂಟು ಬಗೆ ಇದೆ.ಈ ಎಂಟರಲ್ಲಿ ಪ್ರಾವೀಣ್ಯತೆ ಪಡೆದಾತನೆ ಶ್ರೇಷ್ಠ ಕವಿ ಎಂದು (ರಾಜಶೇಖರ ನು ಕಾವ್ಯಮೀಮಾಂಸಾ*) ಹೇಳಿದ್ದಾನೆ. ಕವಿ ಜೀವನದುದ್ದಕ್ಕೂ ಮಗುವಿನ ಕಣ್ಣನ್ನು ಉಳಿಸಿಕೊಂಡು ಬರುವಂಥವನೆ ಕವಿ" ಮಗು ಪ್ರತಿಯೊಂದು ನ್ನು ವಿಸ್ಮಯವಾಗಿ ನೋಡುತ್ತದೆ. *ಕವಿ ಎಂಬ ಪದಕ್ಕೆ ಧೀರ ಬುಧ ,ವಿದ್ವಾನ, ಪ್ರಜ್ಞಾ, ಪಂಡಿತ ದೀಮಾನ್, ದೀರ್ಘದಶಿ* ಎಂಬ ಅರ್ಥಗಳಿವೆ. ಕವಿಯಲ್ಲಿ ಒಬ್ಬ ಕಲಾವಿದ, ವಿಜ್ಞಾನಿ, ಬೋದಕ, ರಾಜಕಾರಣಿ, ಪಿತ, ಪತಿ ಸುತ, ಸ್ನೇಹಿತ, ಹೀಗೆ ಮುಂತಾದವರು ಹುದುಗಿರುತ್ತಾರೆ.( *ಪ್ರಕೃತಿ ಸೃಷ್ಟಿ ಹಿತ್ತಾಳೆಯದಾದರೆ , ಕವಿ ಅದನ್ನು ಚಿನ್ನವನ್ನಾಗಿಸುತ್ತಾನೆ* -ಎಂದು ( *ಸರ್ ಪೀಲಿಪ್ ಸಿಡ್ನಿ*) ಹೇಳುತ್ತಾರೆ.   *ಕವಿ ಪ್ರಪಂಚದ ಶಾಸನಕರ್ತ* ಎಂದು *ಶೆಲ್ಲಿ* ಸಹೃದಯಹೇಳುವರು, *ಟ್ಯಾಗೂರ್* ಹೇಳ್ತಾರೆ (poet is the future of the age) *ಕುವೆಂಪು* ಹೀಗೆ ಹೇಳ್ತಾರೆ  ) *ಕವಿ ಹೃದಯ ಒಂದು ವೀಣೆ, ಲೋಕವನ್ನು ಮಿಡಿಯುವುದು*) ಕವಿ ತನ್ನ ಭೂತ ವರ್ತಮಾನ ಪ್ರಜ್ಞೆ ಅನ್ನು ಸಾರ್ವಕಾಲಿಕ ಪ್ರಜ್ಞೆ ಅನ್ನಾಗು ಮಾರ್ಪಡಿಸುವುದರಲ್ಲಿ ಕವಿ ಕೌಶಲ್ಯ ಅಗ್ಗಳಿಕೆಯಿದೆ, ಆದ್ದರಿಂದಲೇ ವ್ಯಾಸ ,ವಾಲ್ಮೀಕಿ, ಭಾಸ ಕಾಳಿದಾಸ, ಪಂಪ, ಶೇಕ್ಸ್‌ಪಿಯರ್‌ ಹೋಮರ್ ಮುಂತಾದ ಕೃತಿಗಳು ಇಂದಿಗೂ ಪುನರ್ ಪಠಿರವಾಗುತ್ತಿರುವುದಯ. ಹಾಗೂ ನಿತ್ಯಾನಂದದಾಯಕವಾಗಿರುವುದು.

*ಸಹೃದಯ*:- ಸಾಹಿತ್ಯ ಲೋಕದ ಎರಡನೇ ಕಣ್ಣು ಸಹೃದಯ (Reader) *ರಸಿಕ* ಸಹೃದಯ ನಿಗೆ ಬಳಸುವ ಪರ್ಯಾಯ ಪದಗಳು  *ಕಾವ್ಯಗಳನ್ನು ಪರೀಶಿಲಿಸಿ ಮನಸ್ಸೆಂಬ ಕನ್ನಡಿ ನಿರ್ಮಲ ವಾಗಿ ಇರುವುದರಿಂದ ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಗುಂಟೊ ಅವರೇ ಸಹೃದಯರು* ಸಹೃದಯ ನೆಂದರೆ *ವಿಮಾಲ ಪ್ರತಿಭಾಶಾಲಿ* ಸಾಹಿತ್ಯದ ತಿರುಳನ್ನು ಸವಿಯುವುದಕ್ಕೂ ಸರಿಯಾಗಿ ವಾಚಕನಿಗೂ ಶಕ್ತಿ ಸಿದ್ದತೆ ಮತ್ತು ಸಾಹಿತಿಯ ಮಾತಿನ ಕವಚವನ್ನು ಭೇದಿಸಿ ಅದರೊಳಗೆ ಮಿಡಿಯುವ ಕವಿಯ ಸೂಕ್ಷ್ಮ ಭಾವವನ್ನು ತನ್ನ ಸಾಗಿಸಿ ಕೊಳ್ಳ ಬೇಕಾದರೆ ತನ್ನ ದೃಷ್ಟಿ ಚುರುಕು , ಸೂಕ್ಷ್ಮ, ಪ್ರತಿಭೆ, ಕವಿಯ ಆವೇಶವನ್ನು ತಾನು ಉಕ್ಕಿಸಿಕೊಳ್ಳದ ಹೊರತು ಸಹೃದಯನಿಗೆ ರಸ ಸಿದ್ದಿ ಆಗುವುದಿಲ್ಲ. *ಸ್ವರಸ್ವತ್ಯಸ್ತಂ ಕವಿ ಸಹೃದಯಾಖ್ಯಂ ವಿಜಯತೆ* ಎಂಬ *ಅಭಿನವಗುಪ್ತನ* ಮಾತು ಅರ್ಥಪೂರ್ಣವಾಗಿದೆ.ಅಂದರೆ  ಸರಸ್ವತಿಯ ಎರಡು ತತ್ವಗಳು *ಕವಿ ಮತ್ತು ಸಹೃದಯ*
      *ಉಳಿದೆಲ್ಲಾ ಕರ್ಮಫಲಗಳನ್ನು ಮನಬಂದಂತೆ ಕಳುಹು ಸಹಿಸುವೆನೆಯ್ಯ ನಾನವನು ವಿಧಿಯೇ;  ಅರಸಿಕರ ಮುಂದೆ ಕವಿತೆಯನೊಪ್ಪಿಸುವುದನೊಂದ ಬರೆಯದಿರು ಬರೆಯದಿರು ಬರೆಯದಿರು ಶಿರದಿ* ಕವಿಯ ಕಾವ್ಯವನ್ನು ಓದಿ ಚನ್ನಾಗಿದೆ ಚನ್ನಾಗಿಲ್ಲ ಎಂದು ಹೇಳಬೇಕು , ಕವಿತೆಯನ್ನು ಓದದೆಯೆ ಅದನ್ನು ತಿರಸ್ಕರಿಸಿವಂತವರು ಅರಸಿಕರು ಇಲ್ಲವೆ ಪಕ್ಷಪಾತಿಗಳು ಅಥವಾ ಅಸೂಯೆಪರರು ಒಟ್ಟಾರೆ ಸಹೃದಯರನ್ನು, ವಿಮರ್ಶಕರನ್ನು ,ಕವಿಗಳು ಬಾಯಿಗೆ ಬಂದಂತೆ ಆಡಿರುವುದುಂಟು ಈ ವಿಚಾರದಲ್ಲಿ  ಭಾರತೀಯ ಕವಿಗಳು ಸಂಕಟಪಟ್ಡಿರುವುದುಂಟು.

*ವಿಮರ್ಶಕ*:- ಸಾಹಿತ್ಯ ಲೋಕದ *ಮುಕ್ಕಣ್ಣ*
ವಿಮರ್ಶೆ ಎಂಬುದು ಇಂಗ್ಲೀಷ್ ನ Criticism,ಎಂಬುದಕ್ಕೆ ಸಂವಾದಿಯಾಗಿ ಶಬ್ದವನ್ನು ಬಳಸುತ್ತಿದ್ದೇವೆ, ವಿಮರ್ಶೆ ಎಂಬ ಶಬ್ದ *ವಿ+,ಮೃಶ* ನಿಂದ ರೂಪಿತವಾಗಿದೆ * ವಿಶೇಷವಾಗಿ ಒರೆಗೆ ಹಚ್ಚುವುದು ಉಜ್ಜಿ ನೋಡುವುದು ತೀಡುವುದು ಎಂದು ಅರ್ಥ, ಮತ್ತು ಒಂದು ಸಾಹಿತ್ಯ ಕೃತಿಯನ್ನು ವಿಶೇಷವಾಗಿ ಚರ್ಚೆ ನಡೆಸುವುದು. ಸಾಹಿತ್ಯ ವಿಮರ್ಶೆ ಇಂಗ್ಲಿಷ್  Critic ಎಂಬ ಶಬ್ದವು *Kritikos ಎಂಬ ಗ್ರೀಕ್ ಭಾಷೆಯ ಮೂಲದ್ದು Kritikos ಎಂದರೆ To judge ಒಂದು ಕೃತಿಯ ಬೆಲೆಕಟ್ಟುವುದು ಗುಣದೋಷ ವಿವೇಚನೆ ಮಾಡುವುದು ಎಂಬ ಅರ್ಥ, ಈ ಬಗ್ಗೆ *ಶ್ರೀ ಮುಗಳಿಯವರು* ಕಾಯಿದೆ ಕಾನೂನಿನ ಆಧಾರದ ಮೇಲೆ ಕೊಡುವ ತೀರ್ಪಲ್ಲ ಎಂದಿದ್ದಾರೆ.
ಪ್ರಾಚೀನ ಸಾಹಿತ್ಯದಲ್ಲಿ ಕೇವಲ ಲಾಕ್ಷಣಿಕರು ಸಹೃದಯರು ಎಂಬಷ್ಟೆ ಶಬ್ದಗಳು ಬಳಕೆಯಲ್ಲಿತ್ತು.
ವಿಮರ್ಶಕರು ಸಾಹಿತ್ಯದಲ್ಲಿ ಆಗಿರಬಹುದಾದ ಲೋಪದೋಷಗಳನ್ನು ನಿರ್ಲಿಪ್ತತೆಯಿಂದ ಪರೀಕ್ಷಿಸುತ್ತಾನೆ,
 *ಪದವಿಟ್ಟಳುಪದೊಂದಗ್ಗಳಿಕೆ*
ಎಂದು ಕವಿ ನಾರಣಪ್ಪ ದಾರ್ಢ್ಯಾದಿಂದ ಹೇಳಿದರೂ ಇದು ಎಲ್ಲಾ ಕವಿಗಳಿಗೆ ಆ ಮಟ್ಟದ ಶಕ್ತಿ ಇರುವುದಿಲ್ಲ, ಕೃತಿಯ ಪರಿಷ್ಕರಣೆಗೆ ತೊಡಗುವ ರಸಾವೇಶದಲ್ಲಿ ಆಗಿರಬಹುದಾದ *ವ್ಯಾಕರಣ, ಛಂದಸ್ಸು,(ಪ್ರಾಸ ಲಯ) ಅವ್ಯತ್ಪತ್ತಿ ದೋಷಗಳನ್ನು ತಿದ್ದಿ ವಿಶೇಷವಾಗಿ ಆಲೋಚಿಸುವವನು ವಿಮರ್ಶಕ, ರಸಿಕ ರಸಜ್ಞ ಎಂಬ ಶಬ್ದಗಳು ರಸವನ್ನು ಅರಿತು ಸವಿಯುವವನು ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಆದ್ದರಿಂದ ಇತನ ಕೆಲಸ ತುಂಬಾ ಜವಾಬ್ದಾರಿ ಯುತವಾದ ಕಾರ್ಯ, ಸಹಾನುಭೂತಿ, ಕಲ್ಪನಾಶಕ್ತಿ ಜೀವನಾನುಭವ ವಿದ್ವತ್ತು ರೀತಿ ತಂತ್ರ ಸಿಂಹಾವಲೋಕನ ತಂತ್ರ, ಸಮೀಕರಣ ತಂತ್ರಗಳನ್ನು ಗುರುತಿಸಿ ಮೆಚ್ಚುವ ಸಾಮರ್ಥ್ಯ ಬಹುಜ್ಞತೆ ಪೂರ್ವಗ್ರಹ ವಿಮುಕ್ತಿ ಉದಾರತೆ, ವ್ಯಾಖ್ಯಾನ ಕೌಶಲ್ಯತೆ ಇವು ಉತ್ತಮ ವಿಮರ್ಶಕನಲ್ಲಿ ಇರಬೇಕಾದ ಯೋಗ್ಯತೆಗಳು*
ಹಾಗೆ ವಿಮರ್ಶಕರಲ್ಲಿ ಡಾ//ಜಾನ್ಸನ್ ಮೂರು ಬಗೆಯ ವಿಮರ್ಶಕರನ್ನು ಗುರುತಿಸಿದ್ದಾರೆ
೧-ನಿಯಮಗಳನ್ನು ಅರಿಯದ ಮುಗ್ದರು ತಮ್ಮ ಸಹಜವಾದ ಅಬಿರುಚಿಯಿಂದ ಕೃತಿಯನ್ನು ಆಸ್ವಾದಿಸಿ ಅದನ್ನು ಕುರಿತು ತೀರ್ಪು ಕೊಡುವವರು.
೨- ರಸಗ್ರಹಣವೆ ಇವರ ಮುಖ್ಯ ಉದ್ದೇಶ, ತಮಗಾದ ಸಂತೋಷವನ್ನು -,ದೋಷಗಳನ್ನು ಪಕ್ಕಕ್ಕಿಟ್ಟು ಹೇಳಿಕೊಳ್ಳುವಂತವರು ವಿಮರ್ಶಯ ನಿಯಮವನ್ನು ಬಲ್ಲವರು,ನಿಯಮಗಳಿಂದಲೆ ಕೃತಿಯ ಮೌಲ್ಯ ನಿರ್ಣಯಿಸುವವರು.
೩-ವಿಮರ್ಶೆಯ ನಿಯಮಗಳನ್ನಿಟ್ಟುಕೊಂಡು ಕೃತಿಯ *ರೆಕ್ಕ ಪುಕ್ಕ,* ಕತ್ತರಿಸುವ ಇವರಿಂದ ಪ್ರಯೋಜನಕ್ಕಿಂತ ನಷ್ಟವೆ ಹೆಚ್ಚು. ಇಂತಹ ವಿಮರ್ಶಕರು *ಶೂದ್ರಕನ ಮೃಚ್ಛಕಟಿಕ* ನಾಟಕವನ್ನು ನಾಟಕವೆ ಅಲ್ಲ (ಪ್ರಕರಣ)ಎಂದು ತೀರ್ಮಾನಿಸಿ ಬಿಡವರು, ನಿಯಮಾತೀತ ಬೇಕಾಗಿರುವವರು ಮೂರನೆಯ ಬಗೆಯ ವಿಮರ್ಶೆಯರು ಸಾಹಿತ್ಯಲೋಕಕ್ಕೆ ಇವರೆ ಬೇಕಾಗಿರುವವರು ಎನ್ನುತ್ತಾರೆ ಜಾನ್ಸನ್ ಅವರು ,ಇವರನ್ನು ಬಿಟ್ಟರೆ ಮೊದನೆಯ ವಿಮರ್ಶಕು ಎನ್ನುವರು, ಎರಡನೆಯ ತರದ ವಿಮರ್ಶರನ್ನು ಲೆಕ್ಕಕ್ಕೆ ಇರಿಸಿಕೊಳ್ಳಬೇಡಿ ಎನ್ನುತ್ತಾರೆ.
ವಿಮರ್ಶಕನಿಗೆ ೩ಪ್ರಜ್ಞೆಗಳಿರಬೇಕು 
ಎನ್ನುತ್ತಾರೆ ‌
೧  ಸರ್ವ ಸಾಮಾನ್ಯವಾದ ಸಾಹಿತ್ಯ ಸೌಂದರ್ಯ ಪ್ರಜ್ಞೆ.

೨ ವಿಶಿಷ್ಟ ಸಾಹಿತ್ಯ ರೂಪದ  ಪ್ರಜ್ಞೆ.

೩ ಸಾಹಿತಿಯ ವ್ಯಕ್ತಿತ್ವ ಹಾಗೂ ಕೃತಿಯ ವಿಶಿಷ್ಟ ಆಳವಾದ ಪ್ರಜ್ಞೆ, ವಿಮರ್ಶಕರು ಸೌಂದರ್ಯ ಗ್ರಹಣ ಶಕ್ತಿಯನ್ನು ಪಡೆದಿರಬೇಕು ‌ಸಾಹಿತ್ಯದ ಪ್ರಕಾರಗಳನ್ನು ಪ್ರಜ್ಞೆ ಇರಬೇಕು.ವಿಮರ್ಶಕರು ಕಸ- ರಸವನ್ನು ಬೇರ್ಪಡಿಸುವ ಶಕ್ತಿ ಹೊಂದಿರಬೇಕು. ಹಾಗೆ ಎಲ್ಲಾ ಕವಿಗಳು ವಿಮರ್ಶಕರು ಆಗಬೇಕೇಂದೇನು ಇಲ್ಲ ,ಹಾಗೂ ಕವಿಯೆ ಅಲ್ಲದವರು ಶ್ರೇಷ್ಠ ವಿಮರ್ಶಕರಾಗಿದ್ದಾರೆ,ಉದಾ *ಎಲ್, ಎಸ್, ಶೇಷಗಿರಿರಾವ್, ಜಿ.ಎಚ್, ನಾಯಕ್, ಎಚ್.ಎಸ್‌ರಾಘವೇಂದ್ರರಾವ್, ಟಿ.ಪಿ.ಅಶೋಕ, ಕ.ರಂ. ನಾಗರಾಜ್* ಮುಂತಾದವರು. ಹಾಗೆಯೇ *ರಂ ಶ್ರೀ ಮುಗುಳಿ. ಜಿ. ಎಸ್ ಶಿವರುದ್ರಪ್ಪ. ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್. ಗಿರಿಡ್ಡಿ ಗೋವಿಂದರಾಜ* ಇವರು *ಕವಿಗಳೂ* ಹಾಗೂ ಉತ್ತಮ *ವಿಮರ್ಶಕರು* ಹೌದು.
ಹಾಗೆಯೇ ಕೃತಿಯನ್ನು ಕುರಿತ ವಿಮರ್ಶಕನ ನಿರ್ಣಯಗಳು ಸಾಹಿತ್ಯಿಕ ,ಧಾರ್ಮಿಕ, ನೈತಿಕ ತಾತ್ವಿಕ, ಸಾಮಾಜಿಕ, ಮನೋವೈಜ್ಞಾನಿಕ, ಮುಂತಾದ ನಂಬಿಕೆಗಳು ಬದಲಾವಣೆ ಆದಂತೆ ಅವು ಬದಲಾಗುತ್ತಾ ಸಾಗುತ್ತವೆ, ಉದಾಹರಣೆಗೆ ಮಹಾಭಾರತ ರಾಮಾಯಣ, ಕಾಲದಿಂದ ಕಾಲಕ್ಕೆ ವಿಮರ್ಶಕರು ವಿಭಿನ್ನ ದೃಷ್ಟಿ ಕೋನಗಳಿಂದ ನೋಡುತ್ತಾ ಬಂದಿರುವುದೆ ಅದಕ್ಕೆ ನಿದರ್ಶನವಾಗಿದೆ.

*ವಿಮರ್ಶೆಯ ವಿಧಗಳು*
ಆಂತರಿಕ ವಿಮರ್ಶೆ
ಬಾಹ್ಯ ವಿಮರ್ಶೆ
*ವಿಮರ್ಶೆಯ ಇನ್ನಿತರ ವಿಧಗಳು*
೧. ರಸಗ್ರಹಣ ವಿಮರ್ಶೆ
೨ .ವಿವರಣಾತ್ಮಕ ವಿಮರ್ಶೆ
೩. ತೌಲನಿಕ ವಿಮರ್ಶೆ
೪. ಉನ್ಮೀಲನ್ಮಾಕ ಅಥವಾ ರಸಾವಿಷ್ಕರಣ ವಿಮರ್ಶೆ
೫. ವಿಶ್ಲೇಷಣಾತ್ಮಕ ವಿಮರ್ಶೆ
೬. ಮೌಲ್ಯ ನಿರ್ಣಯ ವಿಮರ್ಶೆ
೭. ಅನುಗಮನ ಹಾಗೂ ನಿ.ಗಮನ ವಿಮರ್ಶೆ
೮ .ಅಂತರಾಶ್ತ್ರೀಯ ವವಿಮರ್ಶಾ
ಇದಲ್ಲದೇ *ಪ್ರಾಯೋಗಿಕ ವಿಮರ್ಶೆ ಐ. ಎ. ರಚರ್ಡ್ಸ* ನಿಂದ ಆರಂಭವಾದ  ಒಂದು ವಿಮರ್ಶಾ ಶಿಶ್ತು ,

ಇದಲ್ಲದೆ  *ಮನಶಾಸ್ತ್ರಿಯ ವಿಮರ್ಶೆ*
*ರೂಪನಷ್ಠ ವಿಮರ್ಶೆ*
*ಸಮಾಜ ಶಾಸ್ತ್ರೀಯ ವಿಮರ್ಶೆ*
ಇದರಲ್ಲೇ   *ಚಾರಿತ್ರಿಕ, ಮಾರ್ಕ್ಸ್‌ವಾದಿ  ಸ್ರ್ತಿವಾದಿ* ವಿಮರ್ಶೆಗಳು ಸೇರುತ್ತವೆ.

ಇದರಲ್ಲಿ ಇನ್ನೂ ಅನೇಕ ವಿಚಾರಗಳು ಬಿಟ್ಟು ಹೋಗಿವೆ. ನಿಮ್ಮೊಂದಿಗೆ ಹಂಚಿಕೊಳ್ಳವ ಮನಸ್ಸಾಗಿ ಬರೆದೆನಷ್ಟೆ.

   *ಕೊನೆಯದಾಗಿ ನನ್ನ ಅನಿಸಿಕೆ,, ಈಗಷ್ಟೇ ಚಿಗುರುತ್ತಿರುವ ಕವಿಮನಗಳಿಗೆ ಮೂರನೇ ತರದ ವಿಮರ್ಶಕರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವುದರ ಜೊತೆಗೆ ಬೆಳೆಯುವ ಮೊಗ್ಗನ್ನೆ ಚಿವುಟಿ ರೆಕ್ಕೆ ಪುಕ್ಕ ಕತ್ತರಿಸಿ ಸರ್ವನಾಶ ಮಾಡಿಬಿಡುವರು,ಅದನ್ನು ತಡೆದುಕೊಳ್ಳುವ ಶಕ್ತಿ ಈಗಷ್ಟೇ ಚಿಗುರುತ್ತಿರುವ ಕವಿಗಳಿಗೆ ಇರುವುದಿಲ್ಲವಾದರೂ,, ನಾವು ಬರೆದಿರುವ ಕವಿತೆ ಕವಿತೆಯೇ ಅಲ್ಲ ಅನ್ನುವ ಬದಲು,, ಅದರಲ್ಲಿರುವ ಸ್ವಾಧವನ್ನು ಭರಿಸುವ ಶಕ್ತಿ ೩ನೆ ತರದ ವಿಮರ್ಶಕರು ಹೊಂದಿರಬೇಕು,ಮತ್ತು ಬರಹಗಾರರು ಸಹ ವಿಮರ್ಶಕರು ಹೇಳಿದ್ದೆ ದೊಡ್ಡ ತಪ್ಪಾಯ್ತು ಎಂದು ತಿಳಿಯುವುದು ಸಹ ಒಳಿತಲ್ಲ.ಮತ್ತು ಹೇಳುವುದನ್ನು ಸಾಧಕ ಬಾಧಕ ನೋಡಿ ಚಿಂತಿಸಿ ಮೃದುಮೆಲುವಾಗಿ ಹೇಳಿದಾಗ ಎಲ್ಲಾರೂ ಅರ್ಥೈಸುವರು. ಹಾಗಾಗಿ ವಿಮರ್ಶಕ ಹೇಳಿದ ವಿಚಾರಗಳು ಚಿಂತನೆಗಳೇ ತಪ್ಪು ಎಂದು ನಾವುಗಳು ಯೋಚಿಸುವುದು ಸಹ ನಮ್ಮ ಬೆಳವಣಿಗೆಯ ದೃಷ್ಟಿಯಿಂದ ತಪ್ಪಾಗುತ್ತದೆ.ನಮ್ಮ ಅಹಂ ಅನ್ನು ಪಕ್ಕಕ್ಕೆ ಇಟ್ಟಾಗಷ್ಟೆ ನಾವು ಜೊಳ್ಳು ಕಾಳಾಗದೆ ಗಟ್ಟಿ ಕಾಳಾಗಿ ಉಳಿಯುತ್ತೇವೆ.*

     *ಹಾಗಾಗಿ ವಿಮರ್ಶೆ ಮಾಡುವ ಮುನ್ನ ನಾವು ಯಾವ ತರದ ವಿಮರ್ಶಕರು ಎಂಬುದು ಮೊದಲು ನಮಗೆ ತಿಳಿದಿರಬೇಕಷ್ಟೆ*
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
*ಏನೋ ಹಂಚಿಕೊಳ್ಳುವ ಮನಸ್ಸಾಗಿ ಬರೆದೆ*

       *ತಪ್ಪಿದ್ದರೆ ಮನ್ನಿಸಿ*
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
        *ಧನ್ಯವಾದಗಳೊಂದಿಗೆ*

                         ✍ *ವಾಣಿ ಭಂಡಾರಿ*

ಆಧಾರ:- *ಕನ್ನಡ ಸಾಹಿತ್ಯ ಕೋಶ* ಮತ್ತು
*ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ*
   ವಿಮರ್ಶೆ ಬೇಕು ತನ್ನ ತಾ ತಿಳಿಯಲು, ಪರರ ಭಾವವ ಅರ್ಥೈಸಿಕೊಳ್ಳಲು...
ಕಲಿಕೆಗೆ, ಬೆಳವಣಿಗೆಗೆ. ವಿಮರ್ಶೆ ನಮ್ಮನ್ನು ಕಣ್ತೆರೆಸುತ್ತದೆ, ಹರಿತಗೊಳಿಸುತ್ತದೆ, ಅಹಂ ನ್ನು ತಡೆಯುತ್ತದೆ.
   ವಿಮರ್ಶಿಸುವವ ಸಾಕಷ್ಟು ತಿಳಿದುಕೊಂಡಿದ್ದರೆ ಮಾತ್ರ ಸರಿಯಾದ ವಿಮರ್ಶೆ ಸಾಧ್ಯ, ಕವನ ಬರೆಯುವುದು ಸುಲಭ, ವಿಮರ್ಶೆ ಕಷ್ಟ,ಅಲಂಕಾರ, ಪ್ರಾಸ, ಛಂದಸ್ಸು, ಕನ್ನಡ ಸಾಹಿತ್ಯದ ಮಜಲುಗಳನ್ನು ಅರೆದು ಕುಡಿದವ ಮಾತ್ರ ಉತ್ತಮ ವಿಮರ್ಶಕನಾಗಬಲ್ಲ, ಅದೇ ತಲೆಬರಹದ ಬೇರೊಂದು ಬರಹವನ್ನು ಓದಿದ್ದರೆ ಮಾತ್ರ ಅವೆರಡನ್ನು ಹೋಲಿಕೆ ಮಾಡಬಹುದು. ಹಾಗಾಗಿ ಯಾವುದೇ ಭಾಷೆಯಲ್ಲಿ ಕವಿಗಳ ಸಂಖ್ಯೆ ಜಾಸ್ತಿ, ವಿಮರ್ಶಕರ ಸಂಖ್ಯೆ ಕಡಿಮೆ. 
   ವಿಮರ್ಶಕ ಹೇಳಿದ್ದನ್ನೆಲ್ಲಾ ಕವಿ ಒಪ್ಪಲೇ ಬೇಕೆಂದಿಲ್ಲ, ಕವಿ ಬರೆದದ್ದನ್ನೆಲ್ಲಾ ವಿಮರ್ಶಕ ಉತ್ತಮವೆಂದು ಹೇಳಬೇಕಾಗಿಯೂ ಇಲ್ಲ. ಇಂಗ್ಲಿಷ್ ಸಾಹಿತ್ಯದೊಡನೆ  ಕನ್ನಡ ಸಾಹಿತ್ಯದಲ್ಲೂ ಸ್ನಾತಕೋತ್ತರ ಪದವಿ ಪಡೆದ ಕಾರಣ, ಕನ್ನಡದ ತೌಲನಿಕ ಅಧ್ಯಯನ ಹಾಗೂ ಆಂಗ್ಲ ಭಾಷೆಯ ಕ್ರಿಟಿಕ್ಸ್ ಅಲ್ಪ ಸ್ವಲ್ಪ ಓದಿದ ಜ್ಞಾನದಿಂದ ಈ ಮಾತು ಹೇಳುತ್ತಿರುವೆ.
   ಯಾರು ಉತ್ತಮ ಓದುಗಾರರೋ ಅವರು ಉತ್ತಮ ವಿಮರ್ಶಕರಾಗಬಲ್ಲರು. 
    ವಿಮರ್ಶಕನಿಗೆ ವಿಮರ್ಶೆಯ ನಂತರ ಬರುವ ಸಂತಸದಾಯಕ ಪದಗಳನ್ನೂ, ನಿಂದನೆಗಳನ್ನೂ ಒಪ್ಪಿಕೊಂಡು ಅದಕ್ಕೆ ಸರಿಯಾಗಿ ಉತ್ತರಿಸುವ ತಾಕತ್ತೂ ಇರಬೇಕಾಗುತ್ತದೆ. ತಾನೇಕೆ ಹೀಗಂದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವೂ ಇರಬೇಕಾಗುತ್ತದೆ. 
   ಎಲ್ಲದಕ್ಕೂ ಜ್ಞಾನ ಭಂಢಾರ ಹಾಗೂ ಅಧ್ಯಯನವೇ ಪೂರಕ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ