ಸತಿಧರ್ಮ ಪತಿಧರ್ಮ
ಸತಿಯು ತಾ ಹಿಂಬಾಲಿಸಲು ಪತಿಯಾಣತಿಯಂತೆ
ಅಡಿಗೆ ಮನೆ ಕಾರ್ಯವನು ತಾ ಮುಗಿಸುತ
ಮನೆಯು ಸ್ವಚ್ಛ, ಮಕ್ಕಳಾ ಕಾರ್ಯ
ಪತಿಯ ಇಚ್ಛೆಯೇ ತನ್ನಿಚ್ಛೆಯೆಂದರಿತು
ಮನೆಯ ಸರ್ವವೂ ತಾನಾಗಿ ಭಾಗಿಯಾಗಿ
ಬಂದ ಮನೆಗೆ ಹೆಸರು ತರುವ ಕಾರ್ಯದೊಳಿರೆ
ಅತ್ತೆ ಮಾವ ನಾದಿನಿ ಮೈದುನರ ಸೇವೆಗೈಯುತಲಿ
ಉದ್ಧರಿಸೆ ಗಂಡನ ಮನೆಯ ಮತ್ತೇನಿದೆ
ಸತಿಸೇವೆ ಜಗದೊಳಗೆ ಪತಿವ್ರತೆಯ ಕಾರ್ಯದಲಿ..
ಪತಿಸೇವೆ ಇನಿತಲ್ಲ ತಂದ ಹುಡುಗಿಯನು
ಜನತನದಿ ಕಾವುದಲ್ಲದೆ ತೊಟ್ಟು ಕಣ್ಣೀರು ತರದೆ
ಕಾಯಬೇಕು, ಸಾಕಬೇಕು ತನ್ನಿನಿಯಳ
ಗೃಹಲಕ್ಷ್ಮಿಗೆ ಶರಣಾಗಿ ಗೃಹಕಾರ್ಯದಿ ಸಹಕಾರ ನೀಡುತಲಿ
ಏಳುಹೆಜ್ಜೆಗಳ ಜೊತೆನಡೆದು ತನ್ನನೇ ನಂಬಿ ಬಂದ
ಒಂಟಿ ಹೆಣ್ಣನು ಕಡೆಗಣಿಸಿ ಪರಸ್ತ್ರೀಯ ಅಂದ ನೋಡುವುದೇ?
ತನ್ನವಳ ಸುಖಕೆ ತಾ ಭಾಜನನಾಗಬೇಕು ದು:ಖ ಬರಗೊಡದಂತೆ ಕಾವ ಸೇವಕನಾಗ ಬೇಡವೇ?
ಪರ ಮನೆಯ ಮಗಳ ತಾ ವರಿಸಿ ತಂದು
ನೋವ ಕೊಡುವುದೇ ಬಾಳಿನಲಿ ನಲಿವ ಬಿಟ್ಟು?
ತನ್ನ ಮನೆಯಲಿ ರಾತ್ರಿ ಹಗಲೆನದೆ ದುಡಿಸಿ
ತನಗಿಷ್ಟ ಬಂದಂತೆ ಅವಳ ಬದುಕ ಬಳಸಿ
ದೇಹ ಮನವೆಲ್ಲವನು ತನ್ನೆಡೆಗೆ ಒಲಿಸಿ
ಮತ್ತೆ ನೋವನು ತರದಿರುವುದೇ ಪತಿಧರ್ಮ
ಬೇಕದು ನಿರ್ಮಲ ಪ್ರೀತಿ ತನ್ನ ಸತಿಯೆಡೆಗೆ
ಕೊಂಕು ಮಾತು, ವಕ್ರ ನೋಟ ಸಲ್ಲದು
ಮಗನಂತೆಯೇ ಮಗಳೂ ಶ್ರೇಷ್ಠಳು
ಅದಕೆ ಸತಿ ಮಾತ್ರ ಕಾರಣಳಲ್ಲ!
ಸತಿಯನರಿಯದ ಪತಿಗೆ ಲೋಕದಲಿ ನಲಿವಿಲ್ಲ.
ಸತಿಯ ಮರೆತ ಪತಿರಾಯನಿಗೆ ಸದ್ಗತಿಯೂ ಇಲ್ಲ..
@ಪ್ರೇಮ್@
03.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ