ಶುಕ್ರವಾರ, ಜನವರಿ 1, 2021

ವಿಮರ್ಶೆಗಳು-5


[10/23/2019, 10:07 AM] Wr Nagamma: ಪ್ರೇಮ್ ಜೀ..🙏🏼💐

ನಾನು..

ನನನನನ...ಪದ ಸರಮಾಲೆ..ಬದುಕ ಮಜಲಿನ...ಸಹಜ ನೋಟದ....

ಸರಳ ಸುಂದರ ಕವನಕ್ಕೆ..

ಧನ್ಯವಾದಗಳು.
ಎಸ್.ನಾಗಮ್ಮ🙏🏼🌹
[10/23/2019, 12:05 PM] Wr Vara Lakshmi Amma: ಪ್ರೇಮ್ ಅವರ  ನಾನು
 ನಮ್ಮಲ್ಲಿರುವ ಅನೇಕ ಗುಣಗಳು, ನಮಗಲ್ಲದೇ ಬೇರೆಯವರು ತಿಳಿಯಲು. 
 ಇಂಥ ಒಂದು ಆತ್ಮಾವಲೋಕನ ಕವನ ರಚಿಸಿದ್ದಾರೆ ಪ್ರೇಮ ಅವರು.
  ನಮ್ಮ ಬಾಳಿನ ನಾಳೆಗೆ ನಾವೇ ನಾವಿಕರು, ನಡೆಸುವ ಸ್ಥೈರ್ಯವಿರಬೇಕು.   ಪ್ರಾಸಬಧ್ಧವಾದ ಕವನ🙏
[11/4/2019, 9:42 AM] Wr Champu: ಗುರುಗಳಾದ ನೂರ ಅವರ ಗಜ಼ಲ್ ಒಂದು ನೋಟ

*ಮೂವತ್ತೆರಡು ಪ್ರತಿಮೆಗಳಿಂದ ತೂರಿಬಂದ ಗಜ಼ಲ್*

ಹಾವರಾಣಿ ಜವಾನಿ ಜಾತಕ ಜೀತದಾಳು...ಕನ್ನಡಿ ಕಪಾಟು ಸದ್ದುಮಾಡುವ ಪ್ರತಿಮೆಗಳು..

ಮತ್ಲಾದಲ್ಲಿ ಬಂದ ಪದಗಳು

ಮೊದಲ ಶೇರ್ ಪದಗಳು

ಎರಡನೇಯ ಶೇರ್ ಪದಗಳು

ಮೂರನೇಯ ಶೇರ್ ಪದಗಳು
೧೦
೧೦

ಮಕ್ತಾ ಪದಗಳು

ಇಲ್ಲಿ ಪದಗಳು ಏರಿಳಿತ ಕಾಣಲು ಕಾರಣ ಕವಿ ಮುಕ್ತವಾಗಿ ಮೈದಡವಿ ಭಾವನೆಯ ಓಘಕ್ಕೆ ತನ್ನನ್ನು ತಾನು ಒಡ್ಡಿರುವುದು ಕಾರಣವಾಗಿ ಸಿಗುತ್ತದೆ

ಗುರುಗಳಾದ ಸಿರಾಜಾ ಅವರ ಗಜ಼ಲ್ ಇಲ್ಲಿ ನೋಡುವುದಾದರೆ

*ಗಜಲ್*

ಸಿರಿವಂತರ ಶೋಕಿಗಳಿಗೆ
ತುತ್ತಾಗದಿರು ಮೊಹಬ್ಬತ್//
ಹೃದಯಹೀನರ ತುಟಿಗಳಿಗೆ
ಮುತ್ತಾಗದಿರು ಮೊಹಬ್ಬತ್//

ಗರೀಬನ ಈ ಹೃದಯದಲಿ
ನಿಷ್ಠೆಯ ಖಜಾನೆ ತುಂಬಿದೆ /
ಮಹಡಿಗಳ ಅಲಂಕಾರಗಳ
ಸೊತ್ತಾಗದಿರು ಮೊಹಬ್ಬತ್//

ಬೇವಫಾಗಳ ಜಮಾನದಲಿ
ಸಂತೆ ಕಂತೆಗಳ ಸರಕಾಗದಿರು/
ಕಾಮುಕ ಖವೀಸರ ಕಣ್ಗಳಿಗೆ
ಗೊತ್ತಾಗದಿರು ಮೊಹಬ್ಬತ್//

ನಿನ್ನೊಲವಿನ ಅರಮನೆಯಲಿ
ಕೊಂಚ ಜಾಗವಿರಲಿ ಎನಗೆ/
ಲೂಟಿಕೋರರ ಮಾತುಗಳಿಗೆ
ಮತ್ತಾಗದಿರು ಮೊಹಬ್ಬತ್//

ಗರೀಬಿಯಿದ್ದರೂ ಪ್ರೀತಿಯ
ಮೃಷ್ಠಾನ್ನವಿದೆ ಎದೆಗೂಡಿನಲಿ/
ಸಿರಾಜನನು ಕಡೆಗಣಿಸಿ ಅನ್ಯರ
ಹೊತ್ತಾಗದಿರು ಮೊಹಬ್ಬತ್//

ಶಬ್ದಾರ್ಥ
ಮೊಹಬ್ಬತ್::ಪ್ರೇಮ
ಗರೀಬ::ಬಡವ
ಬೇವಫಾ::ಮಾತು ಮುರಿಯುವ
ಖವೀಸರು::ರಾಕ್ಷಸರು


*ಯು ಸಿರಾಜ್ ಅಹಮದ್ ಸೊರಬ*


ಈ ರೀತಿ ಭಾವನೆಗಳನ್ನು  ಕೆಲವೆ ಪದಗಳಲ್ಲಿ ಹಿಡಿದಿಡುವ ಕೆಲಸವನ್ನು ಪ್ರಾತಃಸ್ಮರಣಿಯರಾದ ಶಾಂತರಸರು ಮುಕ್ತಾಯಕ್ಕ ಅವರು ಮಾಡಿರುವುದುಂಟು..

 ಈ ಕೆಲಸವನ್ನು ನನ್ನನ್ನು ಒಳಗೊಂಡಂತೆ ಗಜ಼ಲ್ ಬರೆಯುವವರು ಮಾಡಿಸರೆ ಗಜ಼ಲ್ ಹಾಡುಗಬ್ಬವಾಗುವುದು.

ಪದಗಳ ಸಮತೋಲನ ನಂತರ ಮಾತ್ರೆಗಳ ಸಮತೋಲನಕ್ಕೆ ಅಣಿ ಆಗಬಹುದು ನಂತರ ಮಾತ್ರಾಗಣಕ್ಕೆ ಹೊರಳಬಹುದು ಅಲ್ಲವೇ? 

ನಿಮ್ಮ ಗಜ಼ಲ್ ಭಾವದ ಮಹೋನ್ನತಿ ಸಾಧಿಸಿ ನಿಂತಿದೆ ಅದ್ಭುತವಗಜ಼ಲ್ ಓದಿಸಿದ ತಮಗೆ ಅಭಿನಂದನೆಗಳು
[11/4/2019, 10:19 AM] Wr Champu: ಪ್ರೇಮ ಅವರ ಗಜ಼ಲ್ 

ಸಾಮಾಜದ ಜನರ ಮುಖವಾಡ ಕಳಚಿಡುವ ಗಜ಼ಲ್..

ಬಹಳ ಅಮೋಘವಾಗಿ ಒಡಮೂಡಿದೆ...

ಇಲ್ಲಿ ಗಮಿಸಬಹುದು
ಸಾಕಿ ಇಲ್ಲಿ ದೋಸ್ತನಾಗುವ ಪರಿ 

ಇವತ್ತು ವಿಹದ ವೇದನೆಯ ವಿಷಯ ಇರುವುದು ತಾವೂ ಗಮನಿಸಿಲ್ಲಂತ ಅನಿಸುತ್ತೆ


ಚಂದದ ಗಜ಼ಲ್ ಓದಿಸಿದ ತಮಗೆ ಧನ್ಯವಾದಗಳು ಸರ್👏👏👏👏
[11/4/2019, 6:53 PM] @PREM@: ಗಝಲ್

ಮಲ್ಲಿಗೆ ಗಿಡ ಬಾಡಿ ಹೋದೊಡೆ
ಹೂವರಳಿಸಬಹುದೇ ದಿಲ್?
ಮರ ಕಡಿದು ಉರುಳಿಸಿದ ಜಾಗದಿ ಮತ್ತೆ ಹಣ್ಣ ಕಾಣಬಹುದೆ ದಿಲ್?


ಮರೆತುಾ ಮರೆಯಲಾರೆ ನಿನ್ನೊಡನೆ ಕಳೆದ ಕ್ಷಣಗಳನು.
ಮದಿರೆಯಂದದಿ ಮತ್ತೆ ಮತ್ತೆ ಜೀವಹಿಂಡಿ ನೆನಪಾಗದೆ ದಿಲ್?

ಮನವು ಅತ್ತು ಹಿಂಡಿ ಹಿಪ್ಪೆಯಂತಾಗಿದೆ ಈಗ.
ಮುದದಿ ಜತೆಗೂಡಿದ ಮುಸುಕು ಕನಸುಗಳು ಕಾಣಲಾರದೆ ದಿಲ್?

ಕರಿಮೋಡಗಳು ಬರಲು ಒಳಗಿಹ ಚಂದಿರ ಕಾಣುವನೇ?
ಕಡಿದಾದ ಬಾಳಲಿ ಬೆಳಕು ಬರುವುದೇ ನೀನಿರದೆ ದಿಲ್?

ಮೊಹಬ್ಬತ್, ಪ್ಯಾರ್, ಇಶ್ಕ್ ಎಲ್ಲವೂ ನಿನ್ನೊಳಿತ್ತು.
ಮತ್ತೊಬ್ಬರ ನಿನ್ನಂತೆ ಕಾಣಲು ಮನ ಒಪ್ಪುವುದೆ ದಿಲ್?

ಮುಸ್ಸಂಜೆಯಂದದಿ ಬಾಡಿಹುದು ಬದುಕ ಹೂವು.
ಮೌನ ತಬ್ಬಿದ ಮನಸು ಮುದುಡಿ ಹೋಗಿದೆ ದಿಲ್.

ಪ್ರೇಮವಿದ್ದರೆ ಬಾಳು, ಇರದಿದ್ದರೆ ಹೋಳಾದಂಥ ಗೋಳು!
ಪರರ ಪ್ರೀತಿಯಲಿ ನಿನ್ನನರಸಲು ಸಾಧ್ಯವಾಗುವುದೆ ದಿಲ್?
@ಪ್ರೇಮ್@
[11/4/2019, 6:59 PM] Wr Shiv Karnandi: ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಒಂದು ಕವಿತೆಯ ಸಾಲು *ಮರೆಯೋ ಮಾತು ಮರೆತುಬಿಡು* ಈ ಗಜಲ್ ಓದಿದಾಗ ನೆನಪಾಯಿತು....ಭಾವತೀರ್ವತೆಯಿಂದ ಮೂಡಿಬಂದ ಗಜಲ್ ಅದ್ಬುತವಾಗಿದೆ👏🏻👏🏻👏🏻👏🏻👏🏻👏🏻👏🏻👏🏻👏🏻👏🏻
[11/4/2019, 10:16 PM] Wr Manasa: ✍ ರಾಜ್ಯ ಮಟ್ಟದ ಕವಿಗೋಷ್ಟಿಗೆ ಬೇಕಾಗಬಹುದಾದ ಮೂಲಭೂತ ಅವಶ್ಯಕತೆಗಳು
1.ಸಭಾಂಗಣ ಮತ್ತು ಕವಿಗಳಿಗೆ ಆಸನ ವ್ಯೆವಸ್ಥೆ.
2.ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ದ ಊಟದ ವ್ಯವಸ್ಥೆ. 
3.ಅಭಿನಂದನ ಪತ್ರಗಳು
4.ಪ್ಲೇಕ್ಸ್
5.ಮೊಮಂಟಂಗಳು
6.ಅತಿಥಿ ಸತ್ಕಾರದ ಅಗತ್ಯ ವಸ್ತುಗಳು-ಶಾಲು,ಸರ್ಟಿಫಿಕೇಟ್ ಹಾರಗಳು ಇತ್ಯಾದಿ
7.ಅತಿಥಿಗಳ ಮತ್ತು ಮುಂಚಿತವಾಗಿ ಬರುವ ಕವಿಗಳಿಗೆ ವಸತಿ ವ್ಯೆವಸ್ಥೆ..

👆👆👆ಇನ್ನು ಏನಾದರು ಅವಶ್ಯಕ ಸಂಗತಿಗಳು ಇದ್ದರೆ ಪಟ್ಟಿಗೆ ಸೇರಿಸಿ
[11/5/2019, 5:05 PM] Wr Vani Bhandari: *ನಮಸ್ತೇ*
🙏🏻🙏🏻🙏🏻

*ಪ್ರೇಮ್ ಅವರ ಗಜಲ್*

*ಅರಿವಿನ ಹೃದಯವ ಅರಿಯದೆ ಇದ್ದಾಗ ಉಂಟಾಗುವ ಭಾವಗಳ ತಳಮಳದ ಚಿಂತನೆ*

          ಹೆಣ್ಣಿನ ನೋವಿನ ಆರ್ತನಾದವು ಮಡಗಟ್ಟಿ ನಿಂತಂತೆ ಇದೆ, ಬಹುಶಃ ಇ ಜಗದಲಿ ಕೆಲವೊಂದು ಹೇಳಲಾಗದ ನೋವುಗಳಿವೆ ಎಂದರೆ ಅದು ಹೆಣ್ಣಿನ ಒಳಮನದ ತಾಕಲಾಟವು ಕಾಣುವುದು.

ಇನ್ನುಳಿದಂತೆ,,,,

👉 *ಸುಂದರವಾದ ಗಜಲ್*
👉 *ಗಜಲ್ ನಿಯಮ ಪಾಲನೆ ಆಗಿದೆ*
👉 *ಭಾವನೆಗಳ ಏರಿಳಿತಗಳನ್ನು ಸಮಾನಾಗಿ ಮೂಡಿಸಿ*
👉 *ಶೇರ್ಗಳನ್ನು ಸಮಾಂತರವಾಗಿ‌ ಮೂಡಿಸಿದಾಗ ಗಜಲ್ ನೋಡಲು ಸುಂದರ*
👉 *ಸುಂದರವಾದ ಸೊಗಸಾದ ಗಜಲ್*

*ಹೀಗೆ ಸದಾ ಬರೆಯುತ್ತಾ ಇರಿ, ಯಶಸ್ಸು ನಿಮ್ಮದಾಗಲಿ*

*ಧನ್ಯವಾದಗಳೊಂದಿಗೆ*

                         *✍ವಾಣಿ ಭಂಡಾರಿ*
[11/6/2019, 8 AM] Wr Yathish Kamaje: *ಪ್ರೇಮ್ ರವರ ಗಜಲ್*

ಭಗ್ನ ಪ್ರೇಮಿಯ ಮನದಾಳದ ನೋವು
ಗಜಲ್ ನಿಯಮದಂತಿದೆ.

ಮಳೆಬಿಲ,ನದಿ ನೀರು, ಬೀಸುಗಾಳಿ ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ?
ಮಳೆಗಾಲದಿ ಒಬ್ಬಳೇ ಕುಳಿತು ಬೇಸರಿಸದಿರಲಿ ಹೇಗೆ ಜಾನು?
👆ಇಲ್ಲಿ ಮಳೆಗಾಲದಲ್ಲಿ ಮಾತ್ರ ನೆನಪಾಗುವುದೇ..!?
ಎಲ್ಲಾ ದಿನದಲ್ಲೂ ಕಾಲದಲ್ಲೂ ಅವನದೇ ನೆನಪು ಅನ್ನುವಂತಿರಬೇಕು.
ಆ ಸೂರ್ಯ,ಬಾನು,ಚಂದ್ರ,ಮೋಡ,ನಕ್ಷತ್ರ,ಗಾಳಿ,ನೀರು ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ.
ಎಂದು ಹೇಳಬಹುದಿತ್ತು ಎನಿಸಿತು.

'ಹರವ ಹರಿಸಲಿ' ಇದು ಅರ್ಥವಾಗಲಿಲ್ಲ.

ತಪ್ಪಿದ್ದರೆ ಮನ್ನಿಸಿ
[11/7/2019, 8:29 AM] Wr Champu: ಪ್ರೇಮ ಅವರ ಜಾನು ಆರಾಧ್ಯ ಗುರುಗಳ...ಸಖಿ..

ಒಂದೇ ದಾರಿಯಲ್ಲಿ ನಡೆಯುವ ಗಜ಼ಲ್'ಗಳು..

ಜಾನುವಿನ ನೋವು ಇಲ್ಲಿ ಸಖಿಯ ನೋವಾಗಿದೆ ದೂರವಾದ ಮನಸ್ಸನ್ನು ಇರ್ವ ಮನಸ್ಸುಗಳು..ಹಂಬಲಿಸುತ್ತಿವೆ

ಅಲ್ಲದೆ ಪ್ರತಿಮೆಗಳು ಸರಳ ಸುಂದರವಾಗಿ ಮೂಡಿಬಂದಿವೆ..ಇರ್ವರಿಗೂ ಬಳಗದ ಪರವಾಗಿ ಅಭಿನಂದನೆಗಳು..

👏👏👏👏👏
[11/11/2019, 5:34 PM] Wr Siraj Ahmed Soraba: *ಜುಲ್ ಕಾಫಿಯ ಗಜಲ್*
ಜುಲ್ ಎಂದರೆ ದ್ವಿತೀಯ ಅಥವಾ ‌ಎರಡನೇ ಬಾರಿ
ಎರಡು ಕಾಫಿಯಗಳ ಗಜಲ್
ಒಂದು ಗಜಲ್ ನ ಪ್ರತಿಯೊಂದು
ಶೇರ್ ನಲ್ಲಿ ಒಂದರ ಮುಂದೆ
ಒಂದು ಕಾಫಿಯ ಇರುತ್ತದೆ
ಒಬ್ಬ ಪ್ರತಿಭಾವಂತ ಗಜಲ್ ಕಾರ ಪದಗಳನ್ನು ಪೋಣಿಸುವ
ಸಮಥ೯ ಕಲೆಯನ್ನು ಪಡೆದಿರುತ್ತಾನೆ ಪ್ರತಿಯೊಂದು
ದ್ವಿಪದಿಯು ಎರಡೆರಡು ಕಾಫಿಯಗಳಿಂದ ಮಾತನಾಡುತ್ತದೆ ಇಂತಹ ಗಜಲ್ ಗಳಿಗೆ ಜುಲ್ ಕಾಫಿಯ
ಗಜಲ್ ಗಳೆನ್ನುವರು

*ಯು ಸಿರಾಜ್ ಅಹಮದ್ ಸೊರಬ*
[11/12/2019, 3:22 PM] Wr Shakunthala Dalera: ೫. *ಪ್ರೇಮ್ ಸಹೋದರಿಗೆ ವಂದನೆಗಳು.*🙏
ತಮ್ಮ ಗಜಲ್ನಲ್ಲಿ ಪ್ರಾಣಿಗೂ ಮತ್ತು ಮನುಷ್ಯರಿಗಿರುವ ಅವಿನಾಭಾವದ  ಸಹಸಂಬಂಧ ಚೆನ್ನಾಗಿ ಮೂಡಿಬಂದಿದೆ. ಕವಿಭಾವ ಸೂಪರ್.ಕುಕೂರ್ ಶಬ್ದ ಮನಸೆಳೆಯಿತು. ಆತ್ಮೀಯ ಅನಂತ ವಂದನೆಗಳು.👏👏👏👏💐💐💐💐
[11/14/2019, 4:40 PM] Wr 100 Ahmd: *ಪ್ರೇಮ್ ಜಿ ಅವರ ಪ್ರಶ್ನೆಯ ಮುಕಾಂತರ ಮಕ್ಕಳೇ ಪ್ರೆಜೆ ಎಂದು ತಿಳಿಸಿದ್ದಾರೆ ಉತ್ತಮ ರಚನೆ ಜಿ ಧನ್ಯವಾದಗಳು*
👏👏👏👏👏👏
[11/18/2019, 7:15 AM] Wr Chandayya: @ ಪ್ರೇಮ್ 
ಬದುಕು ಬೆಳಗುವ ಸ್ಪೂರ್ತಿಯಾದ ಪ್ರಿಯಕರನ ಸೇರುವ ಕ್ಷಣ ಚಂದ... 
ರೂಪಕಗಳ ಸೃಷ್ಟಿಯೇ  ಗಝಲ್ ನ ಮುಖ್ಯ ಅಂಶ ಎಂಬುದು ನನ್ನ ವಯಕ್ತಿಕ ಅನಿಸಿಕೆ...  ಎಲ್ಲರೂ ವಾವ್ ವಾವ್ ಎನ್ನುವಂತ ರೂಪಕಗಳ ಬಳಕೆಯತ್ತ ಕಣ್ಣಾಯಿಸಿರೆ  ಮಸ್ತ್ ಇರುತ್ತೆ...  


ಧನ್ಯವಾದಗಳು 

 *ಚಂದ್ರಯ್ಯ ಚಪ್ಪರದಳ್ಳಿಮಠ*
[11/23/2019, 10:40 AM] Wr Shiv Karnandi: *ಗಜಲ್-೧*

*ಒಣ ಭೂಮಿಗೆ ಮಳೆ ಸುರಿದರೆ ಎಲ್ಲೋ ಒಂದಿಷ್ಟು ಬೆಳೆ ಬೆಳೆಯಬಹುದು ಅದರಂತೆ ಮಕ್ಕಳನ್ನೆ ಕಾಣದ ಹೆಣ್ಮಗಳಿಗೆ ಮಗುವ ಕರುಣಿಸ ದೇವರು, ಕರುಣಿಸಿದವೇ ಕಿತ್ತುಕೊಂಡೆಯೇಕೆ ಎಂಬ ಕೊರಗುವ ಯಾತನೇಯ ಚಿತ್ರಣವನ್ನು ಗಜಲ್ ನಲ್ಲಿ ಕೊಟ್ಟಿದ್ದಾರೆ ಶ್ರೀಮತಿ ಪ್ರೇಮಾ ಮೇಡಂ ಅವರು......*

ಉರ್ದು ಪದಗಳನ್ನು ಬಳಸಿದ ತಪ್ಪಿಗೆ ಮತ್ತೆ ಉರ್ದು ಪದಗಳು ಸಿಗದೆ ಇಂಗ್ಲಿಷ್ ಪದಗಳನ್ನು ಬಳಸಿದ್ದಿರಿ ಹಾಗೇ ಒತ್ತಾಯಪೂರ್ವಕವಾಗಿ ಕಾಫಿಯಾ ವನ್ನಾಗಿ ಮಾಡಿ ಬರೆದಿದ್ದಿರಿ.....

ಗಜಲ್ ನಲ್ಲಿ ಬರುವ ಪ್ರತಿ ರೂಪಕ, ಪ್ರತಿಮೆಗಳು, ಕಾಫಿಯಾ, ರದೀಪ್ ಸಹಜವಾಗಿ ಬರಬೇಕು ಅಂದಾಗ ಆ ಗಜಲ್ ಸುಂದರವಾಗಿ ಇರ್ತದೆ  ಹಾಗೂ ಗಜಲ್ ಗೆಲ್ಲುತ್ತದೆ.....

ಗಜಲ್ ಬರೆಯುವ ನಿಮ್ಮ ಪ್ರೀತಿಗೆ ಧನ್ಯವಾದಗಳು

*ಶಿವಕುಮಾರ ಕರನಂದಿ*✍🏻
[11/26/2019, 11:04 AM] Wr Mangala Kambi: (6)ಪ್ರೇಮ್ ಅವರ ಗಜಲ್ ಕುರಿತು....

ಬೇರ್ಪಟ್ಟ ಸಂಗಾತಿಯನ್ನು ಗಗನ ಕುಸುಮವೆಂದು ಭಾವಿಸುವ ಹಾಗೂ ಸಮಾಧಾನ ಮಾಡಿಕೊಂಡು ಪ್ರೀತಿಗಾಗಿ ಪರಿತಪಿಸುವ ಪರಿ ಚೆನ್ನಾಗಿದೆ.
ಧನ್ಯವಾದಗಳು...

ಮಂಗಳಾ ಕೆಂಡದಮಠ
[11/27/2019, 5:21 PM] Wr Dinesh Sir: 🙏🙏

*ಪ್ರಕಾರ ಗಜ಼ಲ್* 
~~~~~~~~~~

ರಚನೆಕಾರರು :-  *ಪ್ರೇಮ್ ರವರು*

ಗಜ಼ಲ್ ನಿಯಮಾನುಸಾರ ಇದ್ದು  ಚೆಂದವಿದೆ.

🍀 ಸೊಗಸಾದ ಗಜ಼ಲ್. ಒಲವ ಸವಿ ಭಾವವಿದೆ. ಚೆಂದದ ಶೇರ್ ಗಳು ಗಜ಼ಲ್ ಗೆ ಸುಂದರ ಮೆರುಗನ್ನಿತ್ತಿವೆ.

"ಬಾನೆತ್ತರ ಹಾರಲು ಮನ ಗರಿಗೆದರುತ ತವಕಿಸುತಲಿದೆ ಅಂತರಂಗದ ದಿನನನ"👌


*ಉತ್ತಮ ಗಜ಼ಲ್ ಒಂದ ಓದಿಸಿದ ತಮಗೆ ಧನ್ಯವಾದಗಳು*🙏🙏

🍀
ಶುಭವಾಗಲಿ. ಸದಾ ಯಶಸ್ಸು ನಿಮಗೆ  ಸಿಗಲಿ💐💐👍👍

.
[12/4/2019, 11:03 AM] Wr Manjula B K: ಪ್ರೇಮ ಅವರ ಕಲಿಯಬೇಕಿದೆ 

ನಾವು ಕಲಿತಿರುವುದು ಬಹಳಷ್ಟು. ಕಲಿಯಬೇಕಾದದು ಸಾವಿರ ಪಟ್ಟು. 

ಎಲ್ಲ ಕಲಿತಿರುವೆ ಎನ್ನುವ ಮದಕಿಂತ ಏನು ಒಳ್ಳೆಯದನ್ನು ಕಲಿಯಬೇಕಿದೆ ಎನ್ನುವುದು ಮುಖ್ಯ ಎಂಬುವುದು ಉತ್ತಮ ಸಂದೇಶ. 

ಮಂಜುಳಾ. ಬಿ. ಕೆ
[12/4/2019, 5:53 PM] Wr Kumar Chalawadi: " ಪ್ರೇಮ್" ರವರ 'ಕಲಿಯಬೇಕಿದೆ' ಕವನ ಮನನೀಯವಾಗಿದೆ! ಎಲ್ಲ ಅನಿಷ್ಟ , ಅಪಸವ್ಯಗಳ ಆಗರವಾದ ಮನುಜನ, ಮನದ ಒಳಕೋಟಿಯನ್ನು ಚೆನ್ನಾಗಿ ಅಭಿವ್ಯಕ್ತಿಸಿರುವಿರಿ! " ಮತ್ತೆ ನಾನು ಕಲಿಯಬೇಕಿದೆ, ಹೄದಯಗಳ ಜೋಡಿಸುವದನು" ತುಂಬಾ ಕಳ- ಕಳಿಯ ಭಾವನೆ ತೋರಿಸಿರುವಿರಿ. ಈ ಭಾವನೆಯನ್ನು ಎಲ್ಲರೂ ಅನುಸರಿಸಬೇಕಿದೆ! ಸುಂದರ ರಚನೆ👌
[12/9/2019, 7:32 AM] Wr Jeevaraja Chatrad-2: ಕುಸುಮ ಷಟ್ಪದಿ

ಭೋಗ ಮಾಯೆ

ನಗಗಳನು ಹೊರುತಲಿ
ಮೊಗಗಳನು ಮಿಂಚಿಸಲು
ಖಗಮಿಗದ ಮನಶುದ್ಧಿ ಇರದ ವನಿತೆ  
ರೂಪಸಿಯು ನೋಟದಲಿ
ಪಾಪಕೆಳೆದು ಮೋಸದಲಿ
ಕೂಪಕೆಳೆವ ರಕ್ಕಸಿಯು
 ಒಡೆದು ಹಣತೆ

ನೊಗಗಳನು ಹೋರುತಲಿ
ಮೊಗಗಳನು ಮಿಂಚಿಸಲು
ಖಗಮಿಗದ ಮನಶುದ್ದಿ ಮುಖದೊಳಗಿದೆ।
ಸೊಗವೆಳಸಿ ಹುಸಿ ನಗೆಗೆ
ನಗುವಲ್ಲಿ ವಿಷಬಾಣ
ಧಗೆಹತ್ತಿ ಕೊಂದಿರುವ ರಕ್ಕಸಿಯಲಿ॥

ಹೀಗಾಗಬಹುದು



 


೫+೫
೫+೫
೫+೫+೩+೩
೫+೫
೫+೫
೫+೫+೩+೩ 
ಮಾತ್ರಾ ಸಂಯೋಜನೆ ಹೀಗಲ್ಲ ಹೀಗೆ

೫/೫
೫/೫
೫/೫/೫/೨
೫/೫
೫/೫
೫/೫/೫/೨

ಶಿಪ್ರ
[12/9/2019, 4:16 PM] +91 97408 87580: ಪ್ರೇಮ್ ಸರ್ 
ನಮಸ್ಥೆ

ಭ್ರಾಂತಿ ಎನ್ನುವ ಪರಧಿಯೊಳಗೆ ಎಳೆಯ 
ಮಕ್ಕಳನ್ನ ಅರ್ಥ ಮಾಡಿಕೊಳ್ಳದೇ
ಬರಿ ದಂಡನೆಯ ಕಡೆಗೆ
ಶಿಕ್ಷಣ ಕೊಡಬೇಡಿ ಎಂದು ಹೇಳುವ ಮೂಲಕ ಮಕ್ಕಳ ಬಗೆಗಿನ ಅವರ ಕಾಳಜಿ ಬಿಂಬಿತವಾಗುತ್ತದೆ.
ಮಕ್ಕಳೆಂದರೆ ತೋಟದಿ ಅರಳುವ ಬಣ್ಣ ಬಣ್ಣದ ಹೂಗಳು
ಹೊಸುಕದೆ ಹೊಸ ಬದುಕು ನೀಡಿ ಎನ್ನುವ ಆಶಯ ತಮ್ಮ ಕವಿತೆಯಲ್ಲಿ ಎದ್ದು ಕಾಣುತ್ತದೆ
ಸೊಗಸಾಗಿದೆ
🙏🙏🙏🙏🙏
[12/11/2019, 2:51 PM] Wr Sreemati Joshi: ಸೋಲದಿರು
ಸಾಲುತಿಲ್ಲ ನೀನು ನೀಡಿದ ಪ್ರೀತಿಯ ಸಾಲ
ಸಾಲದಾಗಿದೆಯೆನಗೆ ನಿನ್ನ ಹೃದಯದ ಜಾಗ
ಸಾಲು ಸಾಲು ಇರಲು ಬೇಕು ಗಮನದ ಕಾಲ
ಸಾಲಿನೊಳಗೆ ಹುದುಗಬೇಕು ನಿನ್ನಯ ಪಾಲು..
*ಪ್ರೀತಿಯನ್ನೇ ಸಾಲ ವಾಗಿಸಿ ಬಿಟ್ಟಿದ್ದೀರಿ ಹೃದಯದಲ್ಲಿ ಜಾಗವೂ ಜಾಗ*🤣🤣
ಸಾಲುಗಳಲಿ ಬರೆಯಲಾರೆ ಪ್ರೀತಿಯ ಪದರ
ಸಾಲಿನಲ್ಲಿ ನಿಲ್ಲಲಾರೆ, ನೀನಿರದಿರೆ ಬರ!
*ಅವಳ ಪ್ರೀತಿಯ ಪವರ್ ಅಂದ್ರೆ ಹಾಗೆ*
ಸೋತ ಮನಕೆ ಸಾಲು ಖುಷಿಯ ತಂದಿಹೆ ನೀನು
ಗೆದ್ದ ಹಿಗ್ಗು ದೈತ್ಯವಾಗೆ ತಣಿಸಿದೆ ನೀನು.
*ಸೋತ ಮನಕೆ ಖುಷಿಯ ತರುವುದೇ ಪ್ರೀತಿ ಅನುರಾಗ. ಆಗ ಗೆಲುವು ಖಚಿತ ಸೂಪರ್ ಸಾಲು*
6ನಾನೆ ನೀನು ನೀನೆ ನಾನು ಒಂದೆ ಸಾಲಲಿ
ನೀನು ಇರದೆ ಕ್ಷಣಕ್ಷಣವು ನೋವು ಬಾಳಲಿ..
*ಪ್ರೀತಿ ಬೆರೆತ ಬಾಳಿನಲ್ಲಿ  ದೇಹ 2 ಜೀವ ಒಂದು ಎನ್ನುಬಿಎಂಸಿಎ ಭಾವ ನೈಸ್*
ಸೋಲು ಗೆಲುವು ಎರಡು ಇಹುದು ಪ್ರತಿ ಹೆಜ್ಜೇಲಿ
ಸೋತ ಮನವು ಗೆಲ್ಲಬಹುದು ಮುಂದೆ ದಾರೀಲಿ..
*ಸಮರಸವೇ ಜೀವನದ ಭಾಗ* 
ಪ್ರೇಮವೆಂದರೇನು ಎಂದು ಅರಿತೆ ಬದುಕಲಿ
ನೀನು ಬಂದು ಮನದ ಕುಣಿತ ದಿನವು ನಲಿವಲಿ..
*ಪ್ರೇಮವು ಅವಳು ಬಂದ ಮೇಲೆ ಅರಿವಿಗೆ ಬಂತು ಅನ್ನುವ ಆಶಯ ಅವಳ ಮೇಲೆ ಇಟ್ಟ ನಂಬಿಕೆ*
ಸೋತು ಗೆಲುವ ಸಾಹಸವು ಇಹುದು ಜಗದಲಿ
ಸೋಲಲಾರೆನೆನುವ ಮಾತು ಬೇಕು ಜನರಲಿ..

ಸೋಲ ಸಾಲು ಬರಲು ಸನಿಹ ಕುಗ್ಗ ಬಾರದು
ಸೋಲು ಇಂದು ಕಡೆಯದಲ್ಲ, ಗೆಲುವಿಗೂ ಹಿಗ್ಗಬಾರದು..ಸುಖ *ಸುಖ ಸಮನಾಗಿ ಸ್ವೀಕರಿಸುವ ಆಶಯ*
ಸೋತು ಸೋಲು ಸೋಲ ಸಾಲು ಓಡಲಿ
ಗೆಲುವ ಸಾಲು ಸೋತ ಬಳಿಕ ಬಂದು ಸೇರಲಿ..

ಸೋಲಿಗಾಗಿ ಅಂಜಬೇಡ ಸೋಲು ಸೋಲಲಿ
ಗೆಲುವಿನಿಂದ ಬೀಗಬೇಡ ಮುಂದೆ ಬಾಳಲಿ..
*ಒಟ್ಟಾರೆ ಕವಿ ಭಾವ ಸೂಪರ್ಬ್. ಆದರೂ ಸ್ವಲ್ಪ ಗಡಿ ಬಿಡಿ ಯಲ್ಲಿ ಬರೆದ ಹಾಗಿದೆ. ನಿಮ್ಮ ಹಿಂದಿನ ಕವನಗಳಿಗೆ ಹೋಲಿಕೆ ಮಾಡಿದಾಗ*
@ಪ್ರೇಮ್@
11.12.2019
[12/24/2019, 11:18 AM] Wr Jeevaraja Chatrad-2: ಕುಮಾರ ಚಲವಾದಿ ಸರ ನೀವು ಭೇಟಿ ಕೊಟ್ಟ ಸ್ಥಳದ ವಿವರ ಹೀಗಿದೆ.

1) ಸ್ಪಂದನ ಪ್ರೌಢಶಾಲೆ 
೨) ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ 
೩) ಮೂಕಪ್ಪಸ್ವಾಮಿ ದೇವಸ್ಥಾನ 
೪) ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ 
೫) ಕಾಂತೇಶಸ್ವಾಮಿ ದೇವಸ್ಥಾನ 
೬) ತಿಮ್ಮಪ್ಪ ಸ್ವಾಮಿ ದೇವಸ್ಥಾನ 
೭) ರಾಯರ ದೇವಸ್ಥಾನ 
೮) ಕನಕದಾಸರ ದೇವಸ್ಥಾನ  
ಧನ್ಯವಾದಗಳು ಸರ
[12/24/2019, 12:00 PM] Wr Jeevaraja Chatrad-2: ಬಿಡುಗಡೆಯಾದ ಪುಸ್ತಕಗಳು 

೧.ಭಾವ ಬಿಂದಿಗೆ-ರಾಜೇಶ್ವರಿ 
೨.ಸೆಳೆತಗಳ ಸುಳಿಯಲ್ಲಿ -ಚಂದ್ರಯ್ಯ
೩. ಕನಕದಾಸರು ಮತ್ತು ಹಕ್ಕಿಗಳು -ಶಶಿಧರಸ್ವಾಮಿ
೪.ನೂರ್-ಏ-ತಬಸ್ಸುಮ-ನಾಗನೂರ
೫.ಕೋತಿಮರಿ ಭಾಗ-೩- ಖುಷಿ ಕೃಷ್ಣ 
೬. ಖುಷಿ ತರಲಿ ಕೃಷಿ -ಜೀವರಾಜ
೭. ಅನುವಿನು- ಜೀವರಾಜ
೮. ದಾಂಪತ್ಯ ಗೀತೆಗಳು -ಜೀವರಾಜ
೯.ಹನಿ ಹನಿ ಮುತ್ತುಗಳು - ವಾಣಿ ಯತೀಶ ನಾಗಮ್ಮ ಮಾಲಾಮೂರ್ತಿ
[12/24/2019, 11:14 PM] Wr 100 Ahmd: ಗುರುಗಳೆ ನಮಸ್ತೆ👏

ನೀವು ಶಿರೋನಾಮೆಯ ಬಗ್ಗೆ ಹೇಳಿದ್ದೀರಿ ತಪ್ಪಿಲ್ಲ ನಿಮ್ಮ ಮಾತು ಆದರೆ ಕಾವ್ಯಕ್ಕೆ ಭಾಷೆಯ ಪರಿವಿಲ್ಲ ಜೊತೆಗೆ ಎಲ್ಲ ಭಾಷೆಯ ಕಾವ್ಯಗಳು ಉಳಿದ ಭಾಷೆಗೆ ಹರಿದಾಡುತ್ತವೆ 

ನಾನು ಈ ಮುಖಪುಟವನ್ನು ಮೂರು ತರಹದಲ್ಲಿ ಊಹಿಸಿ ಪ್ರಕಟಿಸಿರುವೆ 

ಮೊದಲಿಗೆ ಜಲಾಲುದ್ದಿನ ರೂಮಿ ಮತ್ತು ಶಮ್ಸ್ ತಬರೇಜ್ ಅವರ ಗುರುಭಕ್ತಿಯ ಮತ್ತು ಶಿಷ್ಯರ ಸಂಭದ್ದದ wailding dance ಅನ್ನುವ ಅರ್ಥದಲ್ಲಿ

ನಂತರ ಬೆಳಕಿಗೆ ಮುಖ ಒಡ್ಡಿದಾಗ ಕಣ್ಣು ಉಲ್ಲಾಸಗೊಳಿಸುವ ಜೀವನೋತ್ಸಾಹದ ಉನ್ಮಾದ ಹೊಂದಿರುವ ಭಾವನೆ

ಇನ್ನೊಂದು ಅಂದರೆ ನನ್ನ ಮಡದಿಯ ಹೆಸರು ತಬಸ್ಸುಮ್ ಅಂದ್ರೆ ಮುಗುಳುನಗೆ ನನ್ನ ಹೆಸರು ನೂರ್ ಅಂದರೆ ಪ್ರಕಾಶ ನೂರ್ ಏ ತಬಸ್ಸುಮ್ ಎಂದರೆ ಪ್ರಕಾಶದಲ್ಲಿ ಬೆಳಕು ಎನ್ನುವ ಭಾವದಿಂದ ಈ ಶೀರ್ಷಿಕೆ ಕೊಟ್ಟಿರುವೆ ....👏👏👏👏👏
[12/31/2019, 4:26 PM] Wr Siraj Ahmed Soraba: *ಸಾವನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಾನೇ ಬರೆದ
ಒಂದು ಉದು೯ ಗಜಲ್*

*ಗಜಲ್*

ಖುಷಿಯಾಂ ಬರಸೆ ಸಾವನ್ ಕೀ ತರಹ್
ಜಿಂದಗಿ ಮೆಹಕೆ ಚಂದನ್ ಕೀ ತರಹ್

ಕೋಯೀ ಮುಷ್ಕಿಲ್ ಸತಾಯೇ ನಾತುಝೆ 
ಚಮಕ್ತಾ ರಹೇ ತೂ ಕುಂದನ್ ಕೀ ತರಹ್ 

ತೂ ಅಗರ್ ಚಲ್ತಾ ರಹೇ ರಾಸ್ತೇ ಖುದ್ ಖುಲೇ
ಕಾಮಿಯಾಬಿ ರಹೇ ಆಂಗನ್ ಕೀ ತರಹ್ 

ತೇರೆ ಜನಮ್ ದಿನ್ ಪರ್ ದುಆ ಕರೇಗಾ ಸಿರಾಜ್
ಮನ್ಜಿಲ್ ತುಝೆ ಪ್ಯಾರ್ ಕರೆ ಮಧುಬನ್ ಕೀ ತರಹ್

*ಯು ಸಿರಾಜ್ ಅಹಮದ್ ಸೊರಬ*
[12/31/2019, 4:49 PM] Wr Siraj Ahmed Soraba: ನನ್ನ ಉದು೯ ಗಜಲ್ ನ ಕನ್ನಡಾನುವಾದ

*ಗಜಲ್*

ಹರುಷಗಳ ಬರುತಿರಲಿ ಮಳೆ
ಸಿಂಚನದ ಹಾಗೆ
ಜೀವನದಲಿ ಕಂಪು ಹರಡಲಿ 
ಚಂದನದ ಹಾಗೆ

ಯಾವ ಕಷ್ಟವೂ ಕಾಡದಿರಲಿ
ನಿನಗೆ 
ಬೆಳಗುತಿರು ಗೆಳೆಯ ನೀನು
ಕುಂದನದ ಹಾಗೆ 

ನೀ ನಡೆವಾಗ ದಾರಿಗಳು ಖುದ್ದು
ತೆರೆದುಕೊಳ್ಳಲಿ 
ವಿಜಯವು ನಿನಗಾಗಿರಲಿ ನಿನ್ನ
ಅಂಗನದ ಹಾಗೆ 

ನಿನ್ನ ಜನುಮ ದಿನಕ್ಕಾಗಿ ದುಆ
ಮಾಡುವನು ಸಿರಾಜ್
ಗಮ್ಯವು ನಿನಗೆ ಪ್ರೀತಿಸುತಿರಲಿ 
ಮಧುಬನದ ಹಾಗೆ
[12/31/2019, 7:21 PM] Wr Vani Bhandari: *ನಮಸ್ತೇ*
🙏🏻🙏🏻🙏🏻

         *ಪ್ರೇಮ ಅವರ ಭಾವಗೀತೆ*

        *ಮುರುಳಿಯ ಗಾನಕ್ಕೆ ಮನಸೋಲದವರುಂಟೆ* *ಮಾದವನ ಇಲವ ಗಾನಕ್ಕೆ ಮನಸೋತು ಕಾಯುವ ರಾಧೆಯ ಭಾವ*

             ಮಾದವನ ಕೊಳಲು ಗಾನದಿಂದ ಮನದ ತುಮುಲಗಳನ್ನು ಬೇರೆ ಮಾಡಿಕೊಳ್ಳಬೇಕಾದ ಕವಿಭಾವ ಚಿತ್ರಣ ಚೂಪರ್.

       ನಮ್ಮ ನಂಬಿಕೆಯೆಂಬ ಪ್ರೀತಿ ಅಚಲವಾಗಿರುವ ಮಾದವನೇಗೆ ಮೋಸ ಮಾಡಲು ಸಾಧ್ಯ.

ಅತಿಯಾದ ತುಡಿತ ಮಿಡಿತಗಳ ನಾದಲೋಲವು ಮೈಮನಗಳಲ್ಲಿ ತೇಲಿ,, ಮುಕುಂದನ ಗಾನದ ಗಾಳಿ ಸದಾ ಸುಳಿಯಲಿ ಎಂಬ ಮನದ ಭಾವ ಸೊಗಸಾಗಿದೆ.

ಜಗದಲಿ ಮನುಷ್ಯ ಪ್ರೀತಿಗಿಂತ ಅಲೌಕಿಕವಾದ ಪ್ರೇಮವೇ ಶಾಶ್ವತವಾದ ಪ್ರೇಮವಾಗಿದೆ .ಮಾನವ ಅಂತಹ ಪ್ರೀತಿಯ ಜೊತೆ ಸೇರಲು ಬಯಸಿದರೆ ಸದಾ ತನ್ಮಯ ಭಾವದೊಳಗೆ ಶಾಂತತೆಯಿಂದ ಸಂತೃಪ್ತರಾಗಬಹುದು.

*ಇನ್ನುಳಿದಂತೆ,,,,,*

👉ಚಂದದ ಭಾವದ ಹೂರಣ 

👉ಸರಳ ಪದಗಳ ನರ್ತನ.

👉ಗೇಯತೆಯೊಳಗೆ ಮೀಡಿದ ಭಾವತೀವ್ರತೆ.

👉ಕೊನೆಯ ಸಾಲು ಗಮನಿಸಿ *ಬರುವಿಗಾಗಿ* ಹೀಗೆ ಮಾಡಿ ಪಾ.
👉ಉಳಿದಂತೆ ಚಂದದ ಗೀತೆ, ಸರಳ ಸುಂದರ.


*ನಿತ್ಯ ಬರೆಯಿರಿ ಜಿ,,, ಸಾಹಿತ್ಯ ಯಾನಕ್ಕೆ ಶುಭವಾಗಲಿ ತಮಗೆ ಯಶಸ್ಸು ಸಿಗಲಿ*

*ಧನ್ಯವಾದಗಳೊಂದಿಗೆ*

                     *✍ವಾಣಿ ಭಂಡಾರಿ*
[12/31/2019, 8:16 PM] Wr Vani Bhandari: 🌹🌹🌹🌹🌹🌹🌹🌹🌹
*ಹನಿ ಹನಿ ಇಬ್ಬನಿ /ಚಿಂತಕರ ಚಾವಡಿ*
🎪🎪🎪🎪🎪🎪🎪🎪🎪
*ಇಂದಿನ ಫಲಿತಾಂಶ ಪಟ್ಟಿ*
🍒🍒🍒🍒🍒🍒🍒🍒🍒
*ದಿನಾಂಕ -31.12.19*
*ವಾರ -ಮಂಗಳವಾರ*
*ಅಡ್ಮಿನ್ -ವಾಣಿ ಭಂಡಾರಿ*
*ಪ್ರಕಾರ -ಭಾವಗೀತೆ*
*ಪದ- ಮೌನ*
🦚🦚🦚🦚🦚🦚🦚🦚🦚
*ಭಾವಗೀತೆಗಳ  ಎರಡನೇ ದಿನವಾದ  ಇಂದು ಹನಿಯಲ್ಲಿ ಸುಂದರ ಭಾವ ತುಂಬಿದ ಕವನಗಳು ಆಕರ್ಷಕವಾಗಿ ಮೂಡಿ ಬಂದಿವೆ. ಪ್ರತಿಯೊಂದು ಗೀತೆಯನ್ನು ಓದುವಾಗಲೂ ಮನದೊಳಗೆ ಸುಂದರವಾದ ಭಾವವೊಂದು ಚಿಮ್ಮಿ ನಸುನಕ್ಕಿತು*
🎧🎧🎧🎧🎧🎧🎧🎧🎧
*ಇಂದಿನ ಅತ್ಯುತ್ತಮ ಭಾವಗೀತೆ*
🏆 *ಮಂಗಳ ಕಂಬಿ*

*ಉತ್ತಮ ಗೀತೆಗಳು*
🥇 *ಇಂದಿರಾ*
🥈 *ಪ್ರೇಮ್ ಉದಯ್ ಕುಮಾರ್*
🥉 *ಶ್ರೀಮತಿ ಜೋಶಿ*
🌈🌈🌈🌈🌈🌈🌈🌈🌈
*ಸುಂದರವಾದ ಗೀತೆಗಳನ್ನು ವಿಮರ್ಶೆ ಮಾಡಿದ ಇಂದಿನ  ಅತ್ಯುತ್ತಮ ವಿಮರ್ಶಾ ರತ್ನ*
🧐 *ನಾಗಮ್ಮ*
*ಉತ್ತಮ ವಿಮರ್ಶಕರು*
🧐 *ದಿನೇಶ್*
🎊🎊🎊🎊🎊🎊🎊🎊🎊
*ವಿಜೇತರೆಲ್ಲರಿಗೂ ಅಭಿನಂದನೆಗಳು*
🌹🌹🌹🌹🌹🌹🌹🌹🌹
*ನಾಳೆ  🌷ಸ್ವಾಗತ 🌷  ಎಂಬ ಪದಕ್ಕೆ ಸುಂದರ ಭಾವಗೀತೆ ರಚಿಸಿ ಹನಿಗೆ ಹಾಕಿ*
✍✍✍✍✍✍✍✍✍
*ಚಾವಡಿಯಲ್ಲಿ ಅನಿಸಿಕೆ,  ವಿಮರ್ಶೆ ಬರೆಯಿರಿ*
☘☘☘☘☘☘☘☘☘
*ನಾಳೆಯ ಅಡ್ಮಿನ್ ಮಾಡರ್ನ್  ಕವಿತೆಗಳ ಸರದಾರ, ಗುಳಿಕೆನ್ನೆ ಚೆಲುವ, ಉತ್ತಮ ವಿಮರ್ಶಕರೂ ಆಗಿರುವ ಯತೀಶ್ ಕಾಮಾಜೆಯವರಿಗೆ  ಬಳಗದ ಪರವಾಗಿ ಪ್ರೀತಿಪೂರ್ವಕ ಸ್ವಾಗತ*
🌸🌸🌸🌸🌸🌸🌸🌸🌸
*ನಮಗೆಲ್ಲರಿಗೂ ಬರೆಯಲು  ಸುಂದರ ಅವಕಾಶ ಕಲ್ಪಿಸಿರುವ ಬಳಗದ ಚೇತನ ಖುಷಿ ಗುರುಗಳಿಗೆ ಧನ್ಯವಾದಗಳು*
👏👏👏👏👏👏👏👏👏👏👏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ