ಶನಿವಾರ, ಜನವರಿ 9, 2021

ಕತ್ತಲೆಯಿಂದ ಬೆಳಕಿನೆಡೆಗೆ..

ಕತ್ತಲೆಯಿಂದ ಬೆಳಕಿನೆಡೆಗೆ...


ಅಮವಾಸ್ಯೆಯಲಿಹನು ಮಾನವ
ಬರಬೇಕಿದೆ ಹುಣ್ಣಿಮೆಯೆಡೆಗೆ..

ಕರಿಹಲಗೆಯಲಿ ಕಲಿತರೇನು ಬಿಳಿ ಸೀಮೆಸುಣ್ಣವೇ ಬೇಕಲ್ಲವೇ ತಿದ್ದಲು?

ಕೂದಲು ಕಪ್ಪಾದರೇನು? ಒಳಗಿರುವ ಬುದ್ಧಿ ಬಿಳಿಯಾಗಬೇಕು ತಾನೇ?

ಕರಿಯ ಆಕಳಿನಿಂದಲೂ ಬರುವುದು ಬಿಳಿಯ ಹಾಲೇ ಅಲ್ಲವೇ?

ಕಪ್ಪಂಗಿಯೊಳಗಿರುವ  ವಕೀಲನೂ ಸ್ವಚ್ಛ ಬಿಳಿಯಾದ ನ್ಯಾಯ ನೀಡಬೇಕು ಅಲ್ಲವೇ?

ಕಪ್ಪನೆಯ ಮೋಡವು ಕಪ್ಪಾದ ಮಳೆಯನ್ನು ಸುರಿಸುವುದೇ?

ಕಪ್ಪನೆಯ ತೊಗಳಿರಲು ಯೋಚನೆಯು ಬಿಳಿಯಾಗಬೇಕೆಮಗೆ ಮನವೇ..

ಕರಿಯ ಬೆಕ್ಕಿಗೂ ಬಿಳಿ ಹಾಲೇ ಬೇಕು ಕುಡಿಯಲು..

ಕಪ್ಪನೆ ಕೋಳಿಗೂ ಬಿಳಿಯ ಕಾಳೇ ಬೇಕು ತಿನ್ನಲು..

ಮನುಜಾ ಕತ್ತಲೆಯಿಂದ ನೀನೇಕೆ ನಡೆಯಬಾರದು ಬೆಳಕಿನ ಕಡೆಗೆ..

ರಾಕ್ಷಸ ಕುಲದ ಬುದ್ಧಿಯಿಂದ ದೈವತ್ವದೆಡೆಗೆ?
@ಪ್ರೇಮ್@
06.01.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ