ಶನಿವಾರ, ಜನವರಿ 9, 2021

ಹೊಸ ಆಮೆ ಮೊಲ

ಆಮೆ-ಮೊಲ 

ಆಮೆ ಮೊಲದ ಓಟದ ಕತೆಯ ಮರಿಯು ಕೇಳಿತ್ತು
ಅಜ್ಜನಂತೆ ತಾನಾಗೆನೆಂಬ ವಾದವ ಹೂಡಿತ್ತು

ನಿತ್ಯವು ಜಿಮ್ಮಿಗೆ ಹೋಗಿ ತಾನು ಕಸರತ್ತು ಮಾಡಿತ್ತು
ಆಟದ ಬಯಲಿಗೆ ಹೋಗಿ ಓಟದ ಅಭ್ಯಾಸ ಮಾಡಿತ್ತು..

ಪುಸ್ತಕ ಓದಿ ಹಿರಿಯರ ಕೇಳಿ ಜ್ಞಾನವ ಪಡೆದಿತ್ತು
ಪದೇ ಪದೇ ಲೆಕ್ಕವ ಮಾಡುತ ಗಣಿತದಿ ವೇಗವ ಪಡೆದಿತ್ತು

ಪರೀಕ್ಷೆಗೆಂದು ಅಭ್ಯಾಸ ಮಾಡಿ ಟಿಪ್ ಟಾಪಾಗಿತ್ತು
ಆಮೆಯ ಸೋಲಿಸಿ ಕೆಲಸವ ಪಡೆಯುವ ಗುರಿಯನು ಹೊಂದಿತ್ತು

ಸರಕಾರದ ಅಧಿಕಾರಿಯ ಕೆಲಸಕೆ ಅರ್ಜಿಯ ಹಾಕಿತ್ತು
ದೈಹಿಕ ಪರೀಕ್ಷೆ ಎದುರಿಸಿ ತಾನು ಮೊದಲಾಗಿ ಬಂದಿತ್ತು..

ಮೊಲದ ತಾಯಿಯು ಮರಿಯನು ಕಂಡು ಸಂತಸಪಟ್ಟಿತ್ತು
ಆಮೆಯ ಮೊಮ್ಮಗ ಸೋಮಾರಿಯಾಗಿ ಹಿಂದೆ ಬಿದ್ದಿತ್ತು!
@ಪ್ರೇಮ್@
07.01.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ