ಶುಕ್ರವಾರ, ಜನವರಿ 1, 2021

ಕವನ


ಅರ್ಥೈಸಿಕೋ..

ಬೆಂಕಿ ನಾನು ಸುಡುವೆ ನಿನ್ನ
ನಡತೆ ಸರಿಯಿರಲು ಮಾತ್ರ ಚೆನ್ನ..

ತೀರಾ ಕೀಳು ಮನವು ನಿನ್ನ
ಬೇರೆ ದೃಷ್ಟಿ ಹಾಯಿಸದಿರು ಚಿನ್ನ..
ಅಬಲೆಯೆಂದು ತಿಳಿಯಬೇಡ
ಸಬಲೆಯಾಗೊ ಗುಣವ ನೋಡ..

ಮೌನವನ್ನು ಒಪ್ಪಿಗೆಯೆನಲು ಬೇಡ
ಒಳಗೆ ಕಿಚ್ಚು ಮೇಲೆ ಬೂದಿ
ಅವಕಾಶದಿ ಉಪಯೋಗ ಮಾಲೆ
ಮೇಲೆ ಕುಳಿತ ದೇವ ಲೀಲೆ..

ನಾರಿಯೆಂಬ ಕೀಳು ನೋಟ
ನಾಡಿ ಮಿಡಿತ ಬಾಳ ತೋಟ
ವೇದ ಪುರಾಣ ಶಕ್ತಿ ಯುಕ್ತಿ
ಕಲಿಯ ಬೇಕು ನಿಜದ ನೀತಿ..

ಭೋಗಕಾಗೆ ಬಳಕೆ ಸಲ್ಲ
ಬಂದ ಗುರಿಯ ತಿಳಿಯಿರಲ್ಲ
ಮೇಲು ಕೀಳು ಭೇದ ಮರೆತು
ಸಂತಸವು ಬೆರೆತು ಕೂಡಿ ಕಲಿತು..

ಮುನಿಯೆ ಕ್ಷಣವು ಸರ್ವನಾಶ
ಜಯವು ಒಲಿದು ಬರಲು ವಿಶ್ವಾಸ
ಮಾಡದಿರಲಾರೆ ಮೋಸಕೆ ಮೋಸ
ಕಾದಿಹುದು ಕಾಮುಕರಿಗೆ ಯಮನ ಪಾಶ..
@ಪ್ರೇಮ್@
25.01.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ