ಶುಕ್ರವಾರ, ಜನವರಿ 1, 2021

ಶಾಯರಿಗಳು


ಶಾಯರಿಗಳು

1.ನೀ ಕೊಟ್ಟ ಮುತ್ತನೆಲ್ಲ ನೀರಿನಲಿ ಹಾಕಿಟ್ಟೆ
ನಿತ್ಯವೂ ಪ್ರೇಮದೂಟವ ನೀಡಿದೆ
ಪ್ರೀತಿಯ ಕೈತುತ್ತು ನೀಡಿ ಸಾಕಿದೆ
ಇಂದು ಅವು ಸರವಾಗಿ ನನ್ನ ಕೊರಳ ಕಾಯುತಿವೆ!

2. ಅಮ್ಮನ ಮಡಿಲಲಿ ಮಲಗಿದಾಗ ಬೆಚ್ಚನೆ
ಕೈಯ ಸ್ಪರ್ಶಕೆ ಕರಗಿತು ಮನ ಮೆಲ್ಲನೆ.
ನಾ ನಿನ್ನ ಬಿಟ್ಟು ಬಾಳಲಾರೆ, ಬದುಕಲಾರೆ!
ಇನಿಯ ಬಂದಾಗ ಸರ್ರನೆ ಮರೆತೋಯ್ತು!

3. ಕಡಲ ಮುತ್ತನು ತಂದು ತಾನೇ ಪೋಣಿಸಿ
ಸರವ ಮಾಡಿ ಹಾಕಿದ ಜೀವದ ಗೆಳೆಯ!
ಕೊರಳ ಸುತ್ತಿ ಪ್ರೀತಿಯಿಂದ ಅದು ಅಣಕಿಸಿತು
ನಿನ್ನ ಹುಡುಗಿಯ ನಾನೀಗ ಬಳಸಿರುವೆ!

4. ಮೌನದರಮನೆಯಲಿ ಜಾಗವಿರಲಿಲ್ಲ ಮಾತಿಗೆ
ಹರಟೆಗೆ, ಸಂತೋಷದ ನಗುವಿಗೂ!
ಬಾಳಲಿಲ್ಲವದು ಬಾಡಿಹೋಯಿತು ಬೇಗ!
ಖುಷಿಯ ನೀರು, ಪ್ರೀತಿಯ ಗೊಬ್ಬರ
ಮಾತಿನ ವಿಟಮಿನ್ ಸಿಕ್ಕರಷ್ಟೆ ಚಿಗುರಬಹುದು!

5. ತವರು ಮನೆಯೆಂದರೆ ಅದೆಷ್ಟು ನೆಮ್ಮದಿಯ ಜಾಗ!
ಮೊದಲು ಅಮ್ಮನೊಡನೆ ಜಗಳವಾಡುವಾಗ ತಿಳಿದಿರಲಿಲ್ಲ!
ನಾ ಅಮ್ಮನಾದಾಗಲೇ ಅದು ಅರಿವಾದದ್ದು!!
@ಪ್ರೇಮ್@
28.12.2019

ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ, ದ.ಕ
574239

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ