ಭಕ್ತಿಗೀತೆ
ಜೈಜೈಜೈಜೈ ಜೈಜೈಜೈಜೈ
ಜೈಜೈ ವಿಠ್ಠಲ ಎನ್ನಿರೋ
ಜಯಹರಿ ಜಯಹರಿ ಜಯಹರಿ ಜಯಹರಿ
ಜಯಹರಿ ವಿಠ್ಠಲ ಎನ್ನಿರೋ..
ನಾಮವ ಪಾಡುತ ಭಕ್ತಿಯ ಬೆಳೆಸುತ
ಪೂಜೆಯ ಮಾಡುತ ತಣಿಯಿರೋ
ಹೂವು ಹಣ್ಣಿನ ಪೂಜೆಯನರ್ಪಿಸಿ
ಭಜನೆಯ ಮಾಡುತ ಕುಣಿಯಿರೋ..
ಬೇಡಿದ ವರವನು ಕೊಡುವನು ಹರಿಯು
ಹಾಡುತ ಮಂತ್ರವ ಪಾಡಿರೋ
ನಗೆಯನು ತರಿಸುವ ಬದುಕಲಿ ದೇವನು
ಭಕ್ತಿಯಲಿ ಮೈ ಮರೆಯಿರೋ..
ನಾನು ನೀನು ಎನ್ನುವುದೇನಿದೆ
ಸರ್ವವೂ ಅವನದು ಎನ್ನಿರೋ
ಬಾಗುತ ಬಳುಕುತ ಬಳಲುವ ಬದುಕಲಿ
ವಿಠಲನ ನಂಬಿ ಬದುಕಿರೋ..
ತಂದೆಯು ನೀನೇ ತಾಯಿಯು ನೀನೇ
ಎನುತಲಿ ವರವನು ಬೇಡಿರೋ
ತನುಮನಧನಗಳ ದೇವಗೆ ಅರ್ಪಿಸಿ
ಸಕಲರ ಕಾಯೋ ಎನ್ನಿರೋ..
@ಪ್ರೇಮ್@
15.01.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ