ಶುಕ್ರವಾರ, ಜನವರಿ 1, 2021

ಹಣೆಬರಹ

ಹಣೆಬರಹ

ಹೆಣೆಯಾರಿಹರದು ಹಣೆಯಬರಹಕೆ
ಕರುಣೆಯ ತೋರೋ ಗಣೇಶನಿಹನು

ಮಣೆಯದು ಜಗದಲಿ ಹಣವಿರುವವನಿಗೆ
ಜಾಣೆ ಜಾಣರ ಹಣೆ ಮೇಲೇನಿದೆ?

ಗೆಣೆಕಾರರು ಜೊತೆಗಿರೆ ಸನಿಹದಿ ಸರಸ
ಬೆಣ್ಣೆಯ ಮುದ್ದೆಯ ಕೈಯೊಳು ವಿರಸ..
ದಣಿಗಳು ಆಳಲು ಆಳಿನ ಕೆಲಸ
ಮಣಿ ಮುತ್ತಲ್ಲು ಜೋಡಣೆ ಸಮರಸ..

ಕಣ್ಣಲಿ ಕಂಡರೂ ಮತ್ತೊಮ್ಮೆ ನೋಡು
ಮಣ್ಣಲಿ ರೈತನ ಕಾಯಕ ಪಾಡು
ಗಡಿಯಲಿ ಯೋಧನ ಕಷ್ಟದ ಜಾಡು
ಬಡಿಯುವ ಬಡಗಿಯ ಮರವದು ಬೀಡು..

ಸಿಡಿಮಿಡಿಗೊಳ್ಳದೆ ದೇವನ ಭಜಿಸು
ಸುಖ ದು:ಖ ಹಂಚಿದ ಪರಿಯನು ಸ್ತುತಿಸು
ನಾ ಮೇಲೆನ್ನುತ ಮೆರೆವುದ ತ್ಯಜಿಸು
ಉಸಿರಾಟ ಧ್ಯಾನದಲೇ ಪ್ರಾಣವನಿರಿಸು..

ಆಡುತ ಆಟವ ನೀಡುವ ತಂದೆಯು
ಕಾಡುತ ಜನರ ಕಳೆಯುವ ಕಾಲವು
ಹುಟ್ಟು ಸಾವಿನ ಬದುಕುವ ಆಟವು
ಕೊಟ್ಟು ಪಡೆಯುವ ನವೀನ ಕೂಟವು..
@ಪ್ರೇಮ್@
26.11 2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ