ಸೂರ್ಯಾಸ್ತ
ಹಸ್ತವ ಚಾಚುತ ಪುಸ್ತಕ ರೂಪದಿ
ಬೆಸ್ತರ ಕರೆಯುತ ರಸ್ತೆಯ ಹುಡುಕುತ
ಮಸ್ತಾಗಿ ಬಂದನು ಅಸ್ತಮಿಸದೆ ಭಾನು!
ಅಷ್ಟಕ್ಕೇ ಇಳೆ ಕಾದಿದೆ ಬಿಸಿಲಿಗೆ
ದಷ್ಟ-ಪುಷ್ಟವಾಗಿ ಬೆಳೆಯಲು ಹಸಿರು
ಕಷ್ಟವ ಕಳೆದು ಮೇಲಕ್ಕೇರಲು
ಇಷ್ಟವು ಜೀವ ಸಂಕುಲಕೆ ಬೆಳಕು..
ಇಳಿವಯಸ್ಸದು ಬರಲೇ ಬೇಕು
ಸೆಳೆಯಲು ಬಾಳಿನ ಬೆಲೆಯನ್ನು
ಮಳೆ ಚಳಿಗಂಜದೆ ಸವೆಸಿದ ಕ್ಷಣವ
ಇಳೆಯಲಿ ನಿಂದಿಹ ಜನವದು ನೆನೆವ
ಸೂರ್ಯನ ಅಸ್ತವು ಚಂದ್ರಗೆ ಆಸರೆ
ಕಾರ್ಯವ ಮಾಡಲು ಸೋಮಗೆ ಅದು ಕರೆ
ಭಾರ್ಯೆ ಸಂಧ್ಯೆಯ ಆರತಿಯಾ ಕರೆ
ಆರ್ಯನಾಗಮನಕೇ ಕಾದಿಹಳೇ ಪಹರೆ..
@ಪ್ರೇಮ್@
25.11.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ