ಶುಕ್ರವಾರ, ಜನವರಿ 1, 2021

ಚುಟುಕುಗಳು

ಚುಟುಕುಗಳು

1. ಮಳೆಹನಿ

ಮಳೆಹನಿಯು ಜಾರಿಹುದು ಮೋಡದ ಕೆಳಗೆ
ತಂತಾನೆ ನಡುಗಿಹುದು ಬೀಳುತಲಿ ಇಳೆಗೆ
ಹಸಿರು ಎಲೆಯಲಿ ಹುಳಬಾಧೆಯ ಔಷಧವಿತ್ತು!
ಕೆಂಪು ಕಪ್ಪು ಮಣ್ಣಿನಲಿ ರಾಸಾಯನಿಕ ಹುದುಗಿತ್ತು!

2. ಭಾವ

ಭಾವದ ಹನಿಯದು ಬಾಗುತ ಬಂತು
ಭವದ ಯೋಚನೆಯಲಿ ಮನದಲೆ ನಿಂತಿತು
ಬೀಗರು ಬರುವ ಹಾಗೆಯೇ ಬಂದಿಹುದು
ಭೋರ್ಗರೆಯುತ ಹೋಗದೆ ತಾ ನಿಂದಿಹುದು!

3. ಶಬ್ದ

ಪಟಪಟ ಚಟಚಟ ಮಳೆಹನಿ ವಟವಟ
ಗಟಗಟ ಕುಡಿಯುವ ನೀರಿನ ತಟಪಟ
 ಸುಡುಸುಡು ಬಿಸಿಲಿನ ಬೇಗೆಯು ಮಟಮಟ
ಬೇಡವೊ ತಮ್ಮ ಬದುಕಲಿ ಸದಾ  ಹಠಹಠ!

4. ಹನಿ
ಹಸಿರಿನ ಎಲೆಯಲಿ ಬಿಳಿಬಿಳಿ ಹನಿಯು
ಮಂಜಿನ ಒಳಗಡೆ ಮುತ್ತಿನ ಮಣಿಯು
ಮಲಗಿದ ಕತ್ತಲೆ ಏಳುತ ನೋಡಲು
ಸೂರ್ಯನು ಇಣುಕುತ ಮಂಜನು ತೂರಲು..

5.ಹೀಗೆ..

ಯೋಧನ ಧ್ಯಾನವು ದೇಶದ ಗಡಿಯಲಿ
ರೈತನ ಪ್ರಾಣವು ಹೊಲದ ಫಸಲಲಿ
ವಿದ್ಯೆಗೆ ಮಾನವು ಓದುವ ಮನದಲಿ
ಬುದ್ಧಿಯು ಮಾನ್ಯವು ಒಳ್ಳೆ ಮನುಜನಲಿ..
@ಪ್ರೇಮ್@
01.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ