ಶುಕ್ರವಾರ, ಜನವರಿ 1, 2021

ಆಸರೆ

ಆಸರೆ

ಆಡಿನ ಮರಿಗಾಡೇ ಅಸರೆ
ಕಾಡಿನ ಮೃಗಕೆ ಕಾಡೇ ಆಸರೆ!
ಬಡವನ ಬದುಕಿಗೆ ನೆಮ್ಮದಿಯಾಸರೆ
ತಡ ಮಾಡದೆ ಕೆಲಸವ ಮಾಡುವುದು ಬಾಳಿಗಾಸರೆ..

ಕನಸನು ನನಸು ಮಾಡುವುದೈಸಿರಿ
ಕಸವನು ಧರೆಗೆ ಬಿಸಾಕದಿರುವುದೈಸಿರಿ!
ಮನೆ ಸುತ್ತ ಸ್ವಚ್ಛತೆ ಇಡುವುದು ಐಸಿರಿ
ಮಕ್ಕಳ ಕಡೆ ಗಮನಿಸುವುದೈಸಿರಿ!

ಕಂದರ ಬಾಳಿಗೆ ಪೋಷಕರಾಸರೆ
ಬಂಧನದವರಿಗೆ ಬಿಡುಗಡೆಯಾಸರೆ
ಮುಂದಿನ ದಿನಕೆ ಇಂದಿನ ಕನಸೇ ಬಲಗೈಯಾಸರೆ..

ಪತ್ನಿಯ ಮನಕೆ ಪತಿಯೊಲುಮೆಯಾಸರೆ
ಸಾಕಿದ ನಾಯಿಗೆ ಯಜಮಾನನಾಸರೆ
ರಾಜನ ಕಾರ್ಯಕೆ ಮಂತ್ರಿಯ ಆಸರೆ
ರಥವದು ಸಾಗಲು ಚಕ್ರದ ಆಸರೆ..
@ಪ್ರೇಮ್@
27.11.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ