ನೀರ ಬಿಟ್ಟು ನೆಲದ ಮೇಲೆ..
ದೋಣಿ ಓಡಲಾಗದು ನೀರ ಬಿಟ್ಟು ನೆಲದ ಮೇಲೆ
ಜೀವನವು ಸಾಗದು ಉಸಿರ ಬಿಟ್ಟು ಧರೆಯ ಮೇಲೆ
ಬದುಕು ನಲಿಯದೆಂದೂ ಬದಲಾವಣೆ ಬರದ ಮೇಲೆ
ಬಯಲು ಹದವಾಗದೆಂದೂ ಆಟಗಾರನಾಡದ ಮೇಲೆ
ಕಂದ ಕರಗದಿರನು ಎಂದೂ ಕಲಿಕೆ ಪ್ರಾರಂಭವಾದ ಮೇಲೆ
ಹಾವು ಸಾಯಲೇ ಬೇಕು ಕೋಲು ಮುರಿಯಲೇ ಬೇಕು
ಕಾವು ಕೊಡಲೆ ಬೇಕು ಮೊಟ್ಟೆಯಿಂದ ಮರಿ ಹೊರಬರಬೇಕು
ನಮ್ಮ ಮನದ ಹಾಗೆ ಬದುಕು ಛಲದಿ ಬದುಕುವ
ಸುಮ್ಮನಾದ್ರೂ ಪರರ ನಂಬಿ ಮೋಸ ಹೋಗದಿರುವ
ಭವ್ಯ ಬಾಳ ಪರರಿಗಂಜಿ ಹಾಳು ಮಾಡದೆ
ಸವ್ಯಸಾಚಿ ನಿಮಗೆ ನೀವೆ ನೋವಿಗಂಜದೆ
@ಪ್ರೇಮ್@
04.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ