ಬನ್ನಿ ಮತ್ತೆ ಮಕ್ಕಳಾಗೋಣ
ಬಯಲಿನೆಡೆಗೆ ಓಡಿ ಬನ್ನಿ
ಚಿನ್ನಿದಾಂಡು ಆಡ ಬನ್ನಿ
ಬ್ಯಾಟು ಬಾಲು ಹಿಡಿದು ತನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ...
ತೋಟ -ಗೀಟ ಸುತ್ತ ಬನ್ನಿ
ಬೆಟ್ಟ ಗುಡ್ಡ ಹತ್ತ ಬನ್ನಿ
ಅಟ್ಟ ಹತ್ತಿ ತಿಂಡಿ ತಿನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ....
ಬಯಲ ಅಡಿಗೆ ಮಾಡ ಬನ್ನಿ
ಚಿಟ್ಟೆ ಹಿಡಿವ ಬೇಗ ಬನ್ನಿ
ತಟ್ಟೆ ಇಡ್ಲಿ ಮಾಡ ಬನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ..
ಮಣ್ಣು ಮರಳು ಹೊತ್ತು ತನ್ನಿ
ಮನೆಯನೊಂದು ಕಟ್ಟ ಬನ್ನಿ
ಮೀನು ಹಿಡಿಯೆ ಬುಟ್ಟಿ ತನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ...
ಹೂವ ಕೊಯ್ದು ಬೇಗ ತನ್ನಿ
ಹಾಲು ತುಪ್ಪ ಎಲ್ಲ ತನ್ನಿ
ಕಲ್ಲಿಗೆರದು ಪೂಜೆ ಮಾಡುವ
ಮಕ್ಕಳಾಗುವ..ನಾವು ಮಕ್ಕಳಾಗುವ..
ಜೇಡಿ ಮಣ್ಣ ಕೂಡಿ ತನ್ನಿ
ಹೇಡಿಯಾಗದೆ ಓಡಿ ಬನ್ನಿ
ಬೆನ್ನ ಹಿಂದೆ ರೈಲಲ್ಹೋಗುವ
ಮಕ್ಕಳಾಗುವ ನಾವು ಮಕ್ಕಳಾಗುವ...
ಮರಗಿಡವ ಹತ್ತ ಬನ್ನಿ
ಮಾವು ಹಲಸು ತಿನ್ನ ಬನ್ನಿ
ಕಾಗದದ ದೋಣಿ ಬಿಡಲು ಬನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ...
ಕುಂಟಬಿಲ್ಲೆ ಎಸೆಯ ಬನ್ನಿ
ಮರಕೋತಿಯ ಹಿಡಿಯ ಬನ್ನಿ
ನಿಶ್ಕಲ್ಮಶ ನಗೆಯ ತಿಳಿಸ ಬನ್ನಿ..
ಮಕ್ಕಳಾಗುವ ನಾವು ಮಕ್ಕಳಾಗುವ....
-ವಿಜಯಾ ಹನುಮಂತು ಅವರ ಲೇಖನದಿಂದ ಪ್ರೇರಿತ
@ಪ್ರೇಮ್@
01.01.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ