ಶುಕ್ರವಾರ, ಜನವರಿ 1, 2021

ಜೇನುಗೂಡು

ಜೇನುಗೂಡು

ಜೇನುಗೂಡಿನಲ್ಲಿ ಇಹೆವು
ರಾಣಿಜೇನು ಗುರುಗಳು
ಮಾನವತೆಯ ಕಾದುಕೊಂಡು
ನಡೆಸುವಂಥ ಮನಗಳು..

ಒಂದೆ ಭಾವ ಒಂದೆ ಮನದಿ
ಕೂಡಿ ಬಾಳೊ ವಚನವು
ಆಂಗ್ಲ ಬೇಡ ಮಾತೃಭಾಷೆ
ನುಡಿಯೊ ಸಲಹೆ ಭಾವವು..

ಮೆದುಳು, ಮನಕೆ, ಹೃದಯ
ಕ್ಷಣಕೂ ಮೇವು ಇರುವುದು
ಬೇಧ ಭಾವ ಮರೆತು ತಾವು
ಸಕಲರೊಳಗೆ ಬೆರೆವುದು..

ತಪ್ಪು ತಿದ್ದಿ ತೀಡಿ ಕಲಿಸೊ
ಕವಿ ಮನಗಳ ಆಗರ
ತಪ್ಪು ತಿಳಿದು ಸರಿಪಡಿಸುತ
ಕಲಿಯೊ ಕವಿಯೇ ಸಾಗರ..

ಮಂಜಿನಂಥ ಮುತ್ತಿನಂಥ
ಸಣ್ಣ ಸಣ್ಣ ಹನಿಗಳು
ಹಳ್ಳವಾಗೆ ಒಟ್ಟು ಸೇರೆ
ಮುತ್ತಿನಂಥ ಮಣಿಗಳು!
@ಪ್ರೇಮ್@
11.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ