🥕🥬🥝🌶️🌶️🥥🥕🥬🥝🌶️🌶️🍆🧅
ಅರ್ಪಣೆ
ಕವನದ ಸಾಲದು ನೇಗಿಲ ಯೋಗಿಗೆ
ಅರ್ಪಣೆ ಇಂದು ರೈತನ ದಿನವು
ಹೊಲದಲಿ ದುಡಿವ ರೈತಗೆ ದಿನವೆ
ಪ್ರತಿದಿನ ಧರೆಯಲಿ ಕಾಯಕ ದಣಿವೆ
ತಾನಾಯಿತು ತನ್ನ ಕೆಲಸವು ಆಯಿತು
ಯಾರದೋ ಹೊಟ್ಟೆಗೆ ತನ್ನಯ ಬೆವರಿನ ಸಮರ್ಪಣೆ
ಲೋಕಕಲ್ಯಾಣದ ರೂವಾರಿ ರೈತನು
ಸರ್ವರ ಹಸಿವನು ಇಂಗಿಸೊ ದಾತನು
ಹಸಿರಿನ ಒಡನೆ ಸೆಣಸುವ ಕಾರ್ಯಕರ್ತನು
ಧರೆಯನೆ ನಂಬಿಹ ಹೊಲ ಗದ್ದೆಯ ಒಡೆಯನು
ರೈತನೇ ಇಲ್ಲದೆ ಜಗವೆಂತಿಹುದು
ಹಸಿವಲಿ ಸಾಯುತ ಜನರೆಂತಿಹರು
ಬೆಳೆಗಳ ಬೆಳೆಯುತ ಕಷ್ಟವ ಪಡುತಲಿ
ಜಗದಗಲಕೆ ತನ್ನಿರವನು ಕೊಡುತಲಿ
ಶುಭ ಹಾರೈಕೆಯು ಅನ್ನದಾತನಿಗೆ
ಶುಭದೊಸಗೆಯು ಹಸಿರ ಕಂದನಿಗೆ
ಸರ್ವ ಏಳ್ಗೆಯಾಗಲಿ ಧರಣಿ ಪುತ್ರನಿಗೆ
ಒಳಿತಾಗಲಿ ಎಂದೂ ಹಸಿವ ನಿವಾರಕನಿಗೆ.
@ಪ್ರೇಮ್@
23.12.2020
🥕🥬🥝🌶️🌶️🥥🥕🥬🥝🌶️🌶️🍆🧅
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ