ವಿಜಯೋತ್ಸವ
ಭಾರತದ ನೆಲದಿ ಭಾರತಿಗೆ ವಿಜಯೋತ್ಸವ
ಶತೃಗಳ ಹೆಡೆ ಮೆಟ್ಟಿದ ಯೋಧರ ವಿಜಯೋತ್ಸವ
ನಮನ ನಮ್ಮ ಕಾಯುತಿರುವ ವೀರ ಯೋಧಗೆ
ನಮನ ನಮ್ಮ ಸಲಹುತಿರುವ ಹಸಿರ ದೇವಿಗೆ
ವಿಜಯ ಪತಾಕೆ ಹಾರಲಿ ಹಿಮಾಲಯದ ತಪ್ಪಲಲಿ
ಕಾರ್ಗಿಲಲಿ ಹುತಾತ್ಮರಾದ ವೀರ ಯೋಧ ಮನಗಳಲಿ..
ಮನೆಮನೆಯು ಬೆಳಗಲಿ ದೇಶಪ್ರೇಮ ಮೊಳಗಲಿ
ಭಾರತೀಯರೊಂದೆ ಎಂಬ ಭಾವವಿಂದು ಮೊಳಗಲಿ..
ಹಿಮಗಿರಿಯ ಬೆಳ್ಮುಗಿಲು ಪ್ರೀತಿ ಮಳೆಯ ಸುರಿಸಲಿ
ಹಿಮಾಲಯದ ತಪ್ಪಲಲಿ ಹಸಿರು ಮಾಸದಿರಲಿ
ಕಣಿವೆಯಡಿಯ ಹಿಮದ ತಂಪು ತಣಿಯದಿರಲಿ ನಿರಂತರ
ಮಾಮರದ ಕೋಗಿಲೆಯದು ಹಾಡುತಿರಲಿ ಮರೆತು ಅಂತರ
@ಪ್ರೇಮ್@
16.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ