*☕ನಾನಾರು ಬಲ್ಲಿರೇನು?*☕
*ಗೆಳತಿಯಂದ ನೋಡವಲ್ಲಿ ನಾನೇ ಇರುವೆನು*
*ಗೆಳೆಯನನ್ನು ಕಾಣೆ ನನ್ನ ಹುಡುಕಿ ಬರುವರು*
*ಬಾಳಿಗೊಂದು ಜೊತೆಯನರಸೆ ನಾನೆ ಮೊದಲಲಿ*
*ಜೊತೆಗೆ ಕುಳಿತು ಹೀರಿದಷ್ಟು ಸ್ವಾದ ಮನದಲಿ*
*ಕೆಲಸ ಮಾಡಿ ದಣಿವು ಹೋಗಲೆನ್ನ ಕರೆವರು*
*ಬಿಸಿ ಬಿಸಿಯ ಸೊರ ಸೊರನೆ ಕುಡಿದು ಮೆರೆವರು*
*ಮಲೆನಾಡ ಹೆಸರಿನೊಡನೆ ನಿತ್ಯ ನಾನು ಸೇರಿಕೊಂಡಿಹೆ*
*ಗಡಿನಾಡಿನಲೂ ಬದುಕೊ ಜನರ ಮನವ ಕದ್ದಿಹೆ*
*ಬೆಲ್ಲ ಸಕ್ಕರೆ ಹಾಲಿನೊಡನೆ ಬೆರೆಸಿ ನೋಡಿರಿ*
*ಬಿಸಿಯಾಗಲಿ, ತಣ್ಣಗಾಗಲಿ ಹೀರಿ ಹೇಳಿರಿ*
*ಮನೆಗೆ ಬಂದ ಅತಿಥಿಗೆಲ್ಲ ನನ್ನ ಸತ್ಕಾರ*
*ಮನಕೆ ಹಿತವು ಕುಡಿದ ಮೇಲೆ ಭವ್ಯ ಹೂಂಕಾರ*
*ಮರವು ಅಂದಕಾಗಿ ಕೋಣೆಯೊಳಗೆ ಜೋಡಣೆ*
*ಪುಡಿಯು ಡಬ್ಬದೊಳಗೆ ಸೇರಿಹುದು ಅಡಿಗೆಮನೆ*
*ಒಂದೆ ಕಪ್ಪಿನಲ್ಲಿ ಹೊಸತು ಸಂಬಂಧ ಕುದುರುವುದು*
*ಆಸ್ತಿ ಪಾಸ್ತಿ ಮಾತುಕತೆಯು ಆರಂಭವಾಗುವುದು*
*ಕೊಟ್ಟು ಪಡೆಯೆ ನಾನೆ ನಡುವಿನಲ್ಲಿ ಬರುವೆನು*
*ಎರಡು ಕಡೆಯ ಜನರಿಗೂ ಸಹಾಯ ಮಾಡುವೆನು*
*ಕೋಪ ಶಮನವಾದೊಡೆನ್ನ ಕರೆದು ಹಂಚುತ*
*ಭೂಪನಾದ್ರೂ ಕುಡೀಲೆ ಬೇಕು ರುಚಿಯ ಮೆಚ್ಚುತ*
*ಚಳಿಗೆ ಬಿಸಿಯ ತರುವೆ ಜನರ ದೇಹಕುಷ್ಣವು*
*ಬಿಸ್ಕತ್ತಿನೊಡನೆ ಕುಡಿಯೆ ಆಹಾ ಅದೇನು ಅಂದವು..*
*ಪರಮ ಸ್ನೇಹ ಪ್ರಾರಂಭಿಸೆ ನನ್ನ ಜಾಗವು*
*ಪರರು ಗೆಳೆಯರಾಗುವರು ಇರಲು ನನ್ನಿರವು..*
*ಜೀವನ ಸಂಗಾತಿಯ ಮಾತಿಗೆಳೆಯೆ ನಾನು ನಡುವಲಿ*
*ಬೇಕು ಬೇಡಗಳನ್ನು ತಿಳಿಯೆ ಹೀರಿ ಕಪ್ಪಲಿ..*
*ಗಿಡವ ಬೆಳೆಸಿ ನೀರು ಸುರಿಸಿ ಬುಡವ ಬಿಡಿಸಲು*
*ಗೊಬ್ಬರ ಹರಡಿ ಹದವ ಮಾಡಿ ಗಿಡವ ಬೆಳೆಸಲು*
*ಚಿಗುರ ತೆಗೆದು ಹೂವ ಬಿಟ್ಟ ಸಸಿಯೆ ಅಂದವು*
*ಹೂವಿನಿಂದ ಹೂವಿಗ್ಹಾರೊ ಚಿಟ್ಟೆ ಚಂದವು*
*ಹೂವು ಕಾಯಿಯಾಗುತಿರಲು ಮನವು ಕುಣಿವುದು*
*ಸಾಲು ಕಾಯಿ ಕೆಂಪಾಗೆ ಜೀವ ತಣಿವುದು*
*ಬೀಜ ಕೊಯ್ದು ಒಣಗಿಸುತ್ತ ತನ್ನೆ ಮರೆವುದು*
*ಅದನು ಕುಟ್ಟಿ ಪುಡಿಯ ಮಾಡೆ ರೈತ ಶ್ರಮ ಸಾರ್ಥಕವಾಗುವುದು*
*ಪುಡಿಯ ನೀರಿಗ್ಹಾಕಿ ಕುದಿಸಿ ಪರಿಮಳವ ಸವಿವುದು*
*ಹಾಲು ಹಾಕಿ ಸಿಹಿಯೊಡನೆ ಕುಡಿದು ತಣಿವುದು*
*ರೋಗವಿರದು ಕಾಫಿ ಕುಡಿದ ಮನುಜ ಮಂದಿಗೆ*
*ತೋಟದಲ್ಲಿ ಕೆಲಸ ಮಾಡೊ ಹುಮ್ಮಸ್ಸು ತಂದಿದೆ*
*ಒಂದು ಲೋಟ ಕಾಫಿ ಸಾಕು ಬಂಧುಗಳಿಗೆ ಸತ್ಕಾರ*
*ಬಂದು ಹೋಗೊ ಜನರು ಕಾಫಿ ಕುಡಿಯೆ ಮಮಕಾರ*
*ಪರರ ಹಿತಕಾಗಿ ಬಾಳಿ ಸಂತಸವ ಹಂಚುವೆ*
*ಮನುಜ ನೀನು ಬುದ್ಧಿ ಕಲಿಯೊ ಎಂದು ಬೇಡುವೆ..*
@ಪ್ರೇಮ್@
18.12.2020
☕☕☕☕☕☕☕☕
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ