ನಾನೆಲ್ಲಿರುವೆ
ಕೆಳಗಿರುವವರು ಮೇಲೆ ಹೋಗುತಿಹರು
ಏರುತಲಿಹರು ಸಾಧನೆಗಳ ಶಿಖರ ತಲುಪುತಲಿಹರು
ಪ್ರತಿದಿನ ವೇಗದಿ ಓಡುತಲಿರುವರು
ಗುರಿಯನು ಸೇರಲು ತವಕಿಸುತಿರುವರು..
ನಾನೆಲ್ಲಿರುವೆನು ಕಾಯಕ ತಪ್ಪಿಸಿ
ಮುಂದೆ ಹೇಗೆ ಹೋಗುವೆ ಸೋಮಾರಿತನವುಳಿಸಿ
ಯಾರಲಿ ಕೇಳಲಿ ಮುಂದಡಿಯಿಡಲು
ಏನನು ಮಾಡಲಿ ಮೇಲಕೆ ಏರಲು?
ನಿಂತರೆ ನಿಲ್ಲುವೆ ಹಿಂದಕೆ ಉಳಿವೆ
ಕುಂತರೆ ಕುಳಿತಲೆ ತಕ್ಕು ಹಿಡಿಯುವೆ
ಮುಂದಕೆ ಹೋಗುತ ವೇಗವ ಪಡೆವೆ
ಕಂದಕ ದಾಟುತ ಸಂತಸ ಪಡೆವೆ..
ನನ್ನನು ನಾನು ಓಡಿಸ ಬೇಕು
ಕಾಲಕೆ ತಕ್ಕಂತೆ ಬದಲಾಗಬೇಕು
ಇಂದಿನ ಪೀಳಿಗೆಗೆ ಸರಿಸಾಟಿಯಾಗಲು ಬೇಕು
ತುದಿಯನು ತಲುಪಲು ನಿಲ್ಲದೆ ನಡೆಯಲು ಬೇಕು
ಕಾಲವು ಕಲಿಯುಗ ಕಲಿಯಲು ಬೇಕು
ಪ್ರತಿಕ್ಷಣ ಪ್ರತಿದಿನ ಪಳಗಲು ಬೇಕು
ತಾಳ್ಮೆಯ ಪಡೆಯುತ ಜೀವನ ಸಾಗರ
ದಾಟುತ ನಲಿಯುತ ಬಾಳದು ಆಗರ..
@ಪ್ರೇಮ್@
05.12.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ